ಪಶ್ಚಿಮಬಂಗಾಳದಲ್ಲಿ ಕೋಳಿ ಜ್ವರದ ಸೋಂಕಿನ ಲಕ್ಷಣಗಳನ್ನು ತೋರಿಸುತ್ತಿರುವ ಐವರಿಗೆ ಕಾಯಿಲೆ ಬಂದಿರುವುದು ದೃಢಪಟ್ಟರೆ ಭಾರತವು ತನ್ನ ಪ್ರಥಮ ಕೋಳಿ ಜ್ವರ ಪ್ರಕರಣಗಳನ್ನು ದಾಖಲಿಸಲಿದೆ. ಐದು ಮಂದಿಯೂ ಮುರ್ಶಿದಾಬಾದ್ ನಿವಾಸಿಗಳಾಗಿದ್ದು, ಅವರಿಗೆ ಕೋಳಿ ಜ್ವರದ ವಿರುದ್ಧ ನೀಡಲಾಗುವ ತಮಿಫ್ಲು ರೋಗನಿರೋಧಕ ನೀಡಲಾಗಿದೆ.
ಕೋಳಿ ರೋಗದ ಸೋಂಕು ಹರಡಿ ಕೋಳಿಗಳು ಸತ್ತ ತಕ್ಷಣವೇ ಈ ವ್ಯಕ್ತಿಗಳು ಕೋಳಿಸಾಕಾಣಿಕೆಯನ್ನು ನಿಭಾಯಿಸುತ್ತಿದ್ದರೆಂದು ತನಿಖೆಗಳು ಬಹಿರಂಗಮಾಡಿದೆ. ದೊಡ್ಡ ಕೋಳಿಸಾಕಣೆ ಕೇಂದ್ರಕ್ಕಿಂತ ಸಣ್ಣ ಕೋಳಿಸಾಕಣೆ ಕೇಂದ್ರಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಜ್ವರ, ಕೆಮ್ಮು, ಗಂಟಲುನೋವು, ಸ್ನಾಯುಸೆಳೆತ ಮುಂತಾದ ಲಕ್ಷಣಗಳು ಅವರಲ್ಲಿ ಕಾಣಿಸಿಕೊಂಡಿವೆ. ಕೆಲವು ಜನರು ಉಸಿರಾಟದ ತೊಂದರೆಯಾದ ನ್ಯುಮೋನಿಯದಿಂದ ನರಳುತ್ತಿದ್ದಾರೆ.
ಪುಣೆ ವೈರೋಲಜಿ ಸಂಸ್ಥೆಯ ವಿಶೇಷ ತಂಡವು ರೋಗಿಗಳ ಗಂಟಲು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದೆ. ಅಂತಿಮ ವರದಿಗಳು ಮಂಗಳವಾರ ಹೊರಬೀಳುವುದೆಂದು ನಿರೀಕ್ಷಿಸಲಾಗಿದ್ದು. ಮುಂದಿನ 24 ಗಂಟೆಗಳು ಅಧಿಕಾರಿಗಳಿಗೆ ಆತಂಕದ ಕಾಯುವಿಕೆಯೆನಿಸಿದೆ.
|