ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ದುರಂತದಲ್ಲಿ ನೇತಾಜಿ ಬಲಿ:ವರದಿ ಬಹಿರಂಗ
ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಸುತ್ತ ನಿಗೂಢತೆ ತುಂಬಿರುವಂತೆಯೇ, ಸರಕಾರ ಬಹಿರಂಗಗೊಳಿಸಿದ ಅಧಿಕೃತ ದಾಖಲೆಗಳು ಈ ಕ್ರಾಂತಿಕಾರಿ ನಾಯಕ 1945,ಆಗಸ್ಟ್ 18ರಂದು ಬಲಿಯಾಗಿದ್ದಾರೆ ಎಂದು ಹೇಳುತ್ತವೆ.

ಮಾಹಿತಿ ಹಕ್ಕು ಅರ್ಜಿ(ಆರ್‌ಟಿಐ)ಯೊಂದರ ಮೇಲೆ ಕೇಂದ್ರ ಗೃಹ ಖಾತೆಗಳು ಬಹಿರಂಗಪಡಿಸಿದ ದಾಖಲೆಗಳ ಪ್ರಕಾರ, ಹೆವಿ ಬಾಂಬರ್ ವಿಮಾನ ಕೆ-21 ವಿಮಾನ ತನ್ನ ನಿಯಂತ್ರ ಕಳೆದುಕೊಂಡು ಪತನಗೊಂಡಾಗ ಬೋಸ್, ಪೆಟ್ರೋಲ್ ಟ್ಯಾಂಕ್ ಬಳಿಯಲ್ಲಿ ಕುಳಿತುಕೊಂಡಿದ್ದರು ಎನ್ನಲಾಗುತ್ತದೆ.

91 ದಾಖಲೆಗಳು ಸಾರ್ವಜನಿಕ ಸ್ವಾಮ್ಯದಲ್ಲಿದ್ದು, ಗೃಹ ಸಚಿವಾಲಯಗಳು ಇತರ 100 ದಾಖಲೆಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದೆ.

ನೇತಾಜಿ ಅವರು ಪ್ರಯಾಣಿಸುತ್ತಿದ್ದ ವಿಮಾನವು ತೈವಾನ್‌ನ ತೈಪೇಯಿಯಿಂದ ಮೇಲೇರಿದ ಬಳಿಕ ಹೆಚ್ಚು ಎತ್ತರಕ್ಕೇರಲಾಗಲಿಲ್ಲ ಮತ್ತು ಅದು ಭಾರೀ ಸದ್ದಿನೊಂದಿಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿತ್ತು ಎಂದು ಬೋಸ್ ಅವರ ಸಮೀಪವರ್ತಿ ಹಬೀಬ್ ರೆಹಮಾನ್ ಅವರನ್ನು ವಿಚಾರಣೆಪಡಿಸಿದ್ದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.

ವಿಮಾನದಲ್ಲಿ ಬೋಸ್ ಪೆಟ್ರೋಲ್ ಟ್ಯಾಂಕ್ ಬಳಿಯಲ್ಲಿ ಕುಳಿತಿದ್ದು, ವಿಮಾನ ನಿಯಂತ್ರಣ ಕಳೆದುಕೊಂಡ ವೇಳೆ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೋಸ್ ಅವರ ಉಡುಪಿಗೆ ಬೆಂಕಿ ತಗುಲಿತ್ತು ಎಂದು ಗುಪ್ತಚರ ಸಂಸ್ಥೆಗಳು 1945,ಸೆಪ್ಟೆಂಬರ್ 29ರ ವರದಿಯಲ್ಲಿ ತಿಳಿಸಿವೆ.

ನೇತಾಜಿ ಸಾವಿನ ಹಿಂದಿರುವ ನಿಗೂಢತೆಗೆ ಸಂಬಂಧಿಸಿದ ದಾಖಲೆಗಳನ್ನು ಗೃಹ ಸಚಿವಾಲಯಗಳು ಪಡೆಯಲು ದೆಹಲಿ ಮೂಲದ ಸಂಸ್ಥೆ 'ಮಿಶನ್ ನೇತಾಜಿ' ಮನವಿ ಮಾಡಿರುವ ಹಿನ್ನಲೆಯಲ್ಲಿ ರಹಸ್ಯಪಟ್ಟಿಯಿಂದ ವರದಿಗಳನ್ನು ಬಹಿರಂಗಗೊಳಿಸಲಾಗಿದೆ.

ಆ ವರದಿಯಲ್ಲಿ. ವಿಮಾನ ಪತನದ ನಂತರ ಬೋಸ್ ವಿಮಾನದಲ್ಲಿ ಬಿದ್ದಿದ್ದರು. ಬೆಂಕಿ ತಗುಲಿದ್ದ ಅವರ ಬಟ್ಟೆಯನ್ನು ರೆಹ್ಮಾನ್ ಕಳಚಿದ್ದರು ಎಂದು ತಿಳಿಸಿದೆ.

ತಲೆ ಮತ್ತು ಕುತ್ತಿಗೆಯ ಹೊರತಾಗಿ ಬೋಸ್ ಸುಟ್ಟ ಗಾಯಗಳಿಂದ ನರಳಿದ್ದರೂ, ತಕ್ಕ ಗುಣಮುಖ ಹೊಂದಿದ್ದು, ಸಂಭಾಷಣೆ ಮಾಡುವಷ್ಟು ಚೇತರಿಕೆ ಕಂಡಿದ್ದರು ಎಂದು ಭಾರತೀಯ ರಾಷ್ಟ್ರೀಯ ಸೇನಾ ವರ್ಗದ ಉಪ ಮುಖ್ಯಸ್ಥ ರೆಹ್ಮಾನ್ ಗುಪ್ತಚರ ಸಂಸ್ಥೆಗೆ ಹೇಳಿದ್ದಾರೆ.

ರೆಹಮಾನ್ ಸಂದರ್ಶನ ಲರದಿಯ ಹೊರತಾಗಿಯೂ, ಬಾಹ್ಯ ವ್ಯವಹಾರ ಸಚಿವಾಲಯದಿಂದ ಪಿಎಂಒಗೆ ರವಾನಿಸಲಾದ,ರಾಯಭಾರಿ ಟೆಲಿಗಾಂ ಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಆಯ್ದ ಪತ್ರಗಳನ್ನು ಕೂಡಾ ಬಹಿರಂಗಗೊಳಿಸಲಾಗಿದೆ.

ಸುಭಾಶ್ ಚಂದ್ರ ಭೋಸ್ 1897 ಜನವರಿ 23ರಂದು ಜನಿಸಿದ್ದು, ಇಂದು ಅವರ 111ನೇ ಜನ್ಮದಿನವಾಗಿದೆ.
ಮತ್ತಷ್ಟು
ಪ.ಬಂಗಾಳದಲ್ಲಿ ಐವರಿಗೆ ಕೋಳಿಜ್ವರದ ಲಕ್ಷಣ?
ಬಸ್ ಅಪಘಾತ: 11 ವರ್ಷದ ಬಾಲಕನ ಶೌರ್ಯ
ಸಾಮಾಜಿಕ ಪರಿವರ್ತನೆಗೆ ಹೋರಾಟ: ಮಾಯಾವತಿ
ಶೀತಗಾಳಿಯಿಂದ ತತ್ತರಿಸಿದ ಉತ್ತರಭಾರತ
ರೈಲಿನಲ್ಲಿ ಸ್ಫೋಟಕ ತುಂಬಿದ ಅಜ್ಞಾತ ಚೀಲ
ಐಎಸ್ಐ ಏಜೆಂಟ್‌ಗೆ ಬೆಂಗಳೂರು ಲಿಂಕ್ !