ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಲೆ ಮಾಡಿದ್ದು ಆತ್ಮರಕ್ಷಣೆಗೆ ಎಂದು ಹೇಳಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಘಟನೆಯಲ್ಲಿ ಗಾಯಗೊಂಡ ಕೊಲೆ ಆಪಾದಿತನೊಬ್ಬ, ತನ್ನ ಮೇಲೆ ಆಕ್ರಮಣ ನಡೆಸಲಾಯಿತು, ಆತ್ಮರಕ್ಷಣೆಗೋಸ್ಕರ ಕೊಲೆ ಮಾಡಿದೆ ಎಂದು ಸಮರ್ಥಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಆಪಾದಿತನಿಗಾದ ಗಾಯಗಳ ಕುರಿತು ಸಮರ್ಪಕ ವಿವರಣೆ ನೀಡಲು ಪ್ರಾಸಿಕ್ಯೂಶನ್ ವಿಫಲವಾದಲ್ಲಿ, ಆತ ಆತ್ಮರಕ್ಷಣೆಗೋಸ್ಕರ ಈ ಕೃತ್ಯ ಎಸಗಿದ ಎಂದು ಸ್ವಯಂ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಕ್ರಮಣ ತಪ್ಪಿಸಿಕೊಳ್ಳುವ ಸಂದರ್ಭದಲ್ಲೇ ಗಾಯವಾಗಿದೆ ಎಂಬುದನ್ನು ನಿಖರವಾದ ಸಮರ್ಪಕ ಸಾಕ್ಷ್ಯಾಧಾರದೊಂದಿಗೆ ರಕ್ಷಣಾ ವಕೀಲರು ಒಪ್ಪತಕ್ಕ ವಾದ ಮಂಡಿಸಲು ಸಮರ್ಥರಾದಲ್ಲಿ ಮಾತ್ರವೇ, ಆಪಾದಿತನ ಮನವಿಯನ್ನು ಪರಿಗಣಿಸಬಹುದು ಎಂದು ಅರಿಜಿತ್ ಪಸಾಯಕ್ ಮತ್ತು ಅಫ್ತಾಬ್ ಅಸ್ಲಾಂ ಅವರನ್ನೊಳಗೊಂಡ ನ್ಯಾಯಪೀಠವು ತೀರ್ಪು ನೀಡಿದೆ.

ಆರೋಪಿಗಳಾದ ಶೇಖ್ ಮಜೀದ್ ಮತ್ತು ಶೇಖ್ ಅಬ್ಬಾಸ್ ಅವರ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಪೀಠವು, ಅವರ ಜೀವಾವಧಿ ಶಿಕ್ಷೆಯನ್ನು 10 ವರ್ಷ ಕಾರಾಗೃಹ ಸಜೆಗೆ ಇಳಿಸಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 1989ರ ಅಕ್ಟೋಬರ್ ತಿಂಗಳ 10ರಂದು ಪೂಜೆ ನಡೆಸುತ್ತಿದ್ದ ಒಂದು ಸಮುದಾಯದ ಮೇಲೆ ಆರೋಪಿಗಳು ಇತರರೊಂದಿಗೆ ಸೇರಿಕೊಂಡು ಆಕ್ರಮಣ ಮಾಡಿದ್ದರು. ಅವರ ಪೂಜೆಯಿಂದ ತಮ್ಮ ಪ್ರಾರ್ಥನೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಆಕ್ರಮಣ ನಡೆದಿತ್ತು. ದಾಳಿಯಲ್ಲಿ ಇರಿತದಿಂದಾಗಿ ಜಯನಾರಾಯಣ್ ಎಂಬವರು ಸಾವಿಗೀಡಾಗಿದ್ದರು.

ವಿಚಾರಣಾ ನ್ಯಾಯಾಲಯವು ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಮತ್ತು ಮುಂಬಯಿ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದ ಬಳಿಕ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ತಮಗೂ ಗಾಯಗಳಾಗಿವೆ ಎಂದು ಅವರು ವಾದ ಮಂಡಿಸಿದ್ದು, ಈ ಗಾಯಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ಪ್ರಾಸಿಕ್ಯೂಶನ್ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಂಕೆಯ ಲಾಭ ದೊರೆಯಲು ಪೂರಕವಾಯಿತು. ವಾಸ್ತವವಾಗಿ, ತಮ್ಮ ಮೇಲೆಯೇ ದಾಳಿ ನಡೆದು, ತಾವು ಆತ್ಮರಕ್ಷಣೆಗಾಗಿ ಹೋರಾಡಿದ್ದುದಾಗಿ ಅವರು ವಾದಿಸಿದ್ದರು.
ಮತ್ತಷ್ಟು
ವಿಮಾನ ದುರಂತದಲ್ಲಿ ನೇತಾಜಿ ಬಲಿ:ವರದಿ ಬಹಿರಂಗ
ಪ.ಬಂಗಾಳದಲ್ಲಿ ಐವರಿಗೆ ಕೋಳಿಜ್ವರದ ಲಕ್ಷಣ?
ಬಸ್ ಅಪಘಾತ: 11 ವರ್ಷದ ಬಾಲಕನ ಶೌರ್ಯ
ಸಾಮಾಜಿಕ ಪರಿವರ್ತನೆಗೆ ಹೋರಾಟ: ಮಾಯಾವತಿ
ಶೀತಗಾಳಿಯಿಂದ ತತ್ತರಿಸಿದ ಉತ್ತರಭಾರತ
ರೈಲಿನಲ್ಲಿ ಸ್ಫೋಟಕ ತುಂಬಿದ ಅಜ್ಞಾತ ಚೀಲ