ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾವತಿ ಭದ್ರತೆಗೆ ಇಸ್ರೇಲ್ ತರಬೇತಿ
PTI
ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರಿಗೆ ವಿಶೇಷ ರಕ್ಷಣಾ ತಂಡದ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದರೂ, ಮಾಯಾವತಿ ಸ್ವತಃ ಪರಿಹಾರವೊಂದನ್ನು ಹುಡುಕಿದ್ದಾರೆ. ಇಸ್ರೇಲ್‌ನಿಂದ ಮಾಯಾವತಿಗೆ ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆಯನ್ನು ಖರೀದಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಮಾಯಾವತಿ ಭದ್ರತಾ ಕಮಾಂಡೊಗಳಿಗೆ ತರಬೇತಿ ನೀಡಲು ಇಸ್ರೇಲಿ ಖಾಸಗಿ ಸಂಸ್ಥೆಯ ನೌಕರರು 10 ದಿನಗಳೊಳಗೆ ಲಕ್ನೊಗೆ ಆಗಮಿಸಲಿದ್ದಾರೆ. ಎಸ್‌ಪಿಜಿಗೆ ರಕ್ಷಣೆ ನೀಡುವಂತೆ ಮನಮೋಹನ ಸಿಂಗ್ ಅವರಿಗೆ ಬರೆದ ಮೂರು ಪತ್ರಗಳಿಗೆ ಉತ್ತರವಿರಲಿಲ್ಲ. ಮಾಯಾವತಿ ಹೊಸ ಗುಂಡು ನಿರೋಧಕ ವಾಹನವೊಂದನ್ನು ದೆಹಲಿಯ ಇತರೆ ಪ್ರತಿಷ್ಠಿತ ಗಣ್ಯರಿಗೆ ಸಮನಾಗಿ ಖರೀದಿಸಿದ್ದಾರೆ.

ಇಸ್ರೇಲಿನ ಭದ್ರತಾ ವ್ಯವಸ್ಥೆಯು ಉತ್ತರಪ್ರದೇಶ ಸರ್ಕಾರಕ್ಕೆ ವರ್ಷಕ್ಕೆ 24 ಕೋಟಿ ರೂ. ವೆಚ್ಚ ತಗಲುತ್ತದೆ. ಉತ್ತರಪ್ರದೇಶದಲ್ಲಿ ಅವರು ಅಧಿಕಾರಕ್ಕೆ ಮರಳಿದ ಬಳಿಕ ಭದ್ರತಾ ರಕ್ಷಣೆ ಬಗ್ಗೆ ಕೇಂದ್ರ ಸರ್ಕಾರದ ಜತೆ ಸಮರಕ್ಕೆ ಇಳಿದಿದ್ದರು. ಕಾಕತಾಳೀಯವೆಂದರೆ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಭಯೋತ್ಪಾದನೆ ದಾಳಿಗಳ ಪ್ರಮಾಣವು ಹೆಚ್ಚಿದೆ.
ಮತ್ತಷ್ಟು
ತಸ್ಲೀಮಾಗೆ ಫ್ರೆಂಚ್ ಪ್ರಶಸ್ತಿಗೆ ಸರ್ಕಾರ ನಕಾರ
ಕೊಲೆ ಮಾಡಿದ್ದು ಆತ್ಮರಕ್ಷಣೆಗೆ ಎಂದು ಹೇಳಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ವಿಮಾನ ದುರಂತದಲ್ಲಿ ನೇತಾಜಿ ಬಲಿ:ವರದಿ ಬಹಿರಂಗ
ಪ.ಬಂಗಾಳದಲ್ಲಿ ಐವರಿಗೆ ಕೋಳಿಜ್ವರದ ಲಕ್ಷಣ?
ಬಸ್ ಅಪಘಾತ: 11 ವರ್ಷದ ಬಾಲಕನ ಶೌರ್ಯ
ಸಾಮಾಜಿಕ ಪರಿವರ್ತನೆಗೆ ಹೋರಾಟ: ಮಾಯಾವತಿ