ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 111ನೇ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಬುಧವಾರ ಆಚರಿಸಲಾಯಿತು. ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ಹಿರಿಯ ಸಿಪಿಎಂ ನಾಯಕ ಜ್ಯೋತಿ ಬಸು ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಮನ್ ಜೋಷ್ ನೇತಾಜಿ ಪ್ರತಿಮೆಗೆ ಪುಷ್ಪಗುಚ್ಛ ಅರ್ಪಿಸಿದ ಗಣ್ಯರು.
ಸಮಾರಂಭದಲ್ಲಿ ಮಾತನಾಡಿದ ನೇತಾಜಿ ಜನ್ಮ ಜಯಂತಿ ಉದ್ಘಾಟನ ಸಮಿತಿಯ ಕಾರ್ಯದರ್ಶಿ ಸುಬ್ರತೊ ಬೋಸ್, ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆ ನೇತಾಜಿ ತಿಳಿವಳಿಕೆ ಇಂದಿಗೂ ಪ್ರಸ್ತುತವಾಗಿದೆ ಮತ್ತು ರಾಷ್ಟ್ರ ಪ್ರಗತಿಯತ್ತ ಸಾಗಲು ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕು ಎಂದು ನುಡಿದರು.
ರಾಷ್ಟ್ರದ ಜನತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರಕಿಸಲು ಸಮಾಜವಾದವೊಂದೇ ದಾರಿ ಎಂದು ಅರಿತುಕೊಂಡ ಮೊದಲ ವ್ಯಕ್ತಿ ನೇತಾಜಿ ಎಂದು ಅವರು ನುಡಿದರು. ಆದ್ದರಿಂದ ನಾವು ಎಡ ಚಳವಳಿಯನ್ನು ಬಲಪಡಿಸಬೇಕು. ನೇತಾಜಿ ಅವರನ್ನು ಸ್ಮರಿಸಲು ಇದೊಂದೇ ಉಳಿದಿರುವ ದಾರಿ ಎಂದು ಅವರು ನುಡಿದರು.
|