ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೂಚ್‌ಬಿಹಾರ್, ಹೂಗ್ಲಿ ಕೋಳಿಜ್ವರ ಪೀಡಿತ
ಪಶ್ಚಿಮಬಂಗಾಳದ ಕೂಚ್‌ಬಿಹಾರ್ ಮತ್ತು ಹೂಗ್ಲಿ ಬುಧವಾರ ಕೋಳಿಜ್ವರ ಪೀಡಿತ ಎಂದು ಘೋಷಿಸಲಾಗಿದ್ದು, ಕೋಳಿಜ್ವರದಿಂದ ಪೀಡಿತವಾದ ಜಿಲ್ಲೆಗಳ ಸಂಖ್ಯೆ 9ಕ್ಕೆ ದಾಟಿದೆ. ಪಶ್ಚಿಮಬಂಗಾಳದ ಅರ್ಧ ಭಾಗದಷ್ಟು ಪ್ರದೇಶ ಕೋಳಿಜ್ವರದ ಸೋಂಕಿಗೆ ಗುರಿಯಾಗಿದ್ದು, ಅಧಿಕಾರಿಗಳು ದಿನನಿತ್ಯ ಮೂರು ಲಕ್ಷ ರೋಗಪೀಡಿತ ಕೋಳಿಗಳನ್ನು ವಧೆ ಮಾಡಲು ಸಂಕಲ್ಪಿಸಿದ್ದಾರೆ.

ಕೂಚ್ ಬಿಹಾರ್ ಮತ್ತು ಹೂಗ್ಲಿ ಜಿಲ್ಲೆಗಳ ಕೋಳಿಗಳ ಮಾದರಿಗಳನ್ನು ಪ್ರಯೋಗಾಲದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅವು ಸಕಾರಾತ್ಮಕವೆಂದು ಕಂಡುಬಂತು ಎಂದು ಪಶುಸಂಪನ್ಮೂಲ ಅಭಿವೃದ್ಧಿ ಸಚಿವ ಅನಿಸುರ್ ರೆಹಮಾನ್ ತಿಳಿಸಿದರು.

ಕೂಚ್ ಬಿಹಾರ್ ಜಿಲ್ಲೆಯ ದಿನ್‌ಹಾಟಾ ಮತ್ತು ಹೂಗ್ಲಿ ಜಿಲ್ಲೆಗಳು ಕೋಳಿಜ್ವರಪೀಡಿವೆಂದು ಅಧಿಕೃತವಾಗಿ ಗುರುತಿಸಲಾಗಿದ್ದು ಕೋಳಿಗಳ ವಧೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ನುಡಿದಿದ್ದಾರೆ. ಆದರೆ ಮಾನವರಿಗೆ ಕೋಳಿಜ್ವರ ಸೋಂಕಿದ ಪ್ರಕರಣಗಳು ವರದಿಯಾಗಿಲ್ಲ ಎಂದು ಸಚಿವರು ಹೇಳಿದರು. ಕೋಳಿಗಳ ದಿನನಿತ್ಯದ ಮಾರಣಹೋಮ 20 ಲಕ್ಷವೆಂದು ನಿಗದಿಯಾಗಿದ್ದು, ಅದು ಹೆಚ್ಚಾಗುವ ಸಾಧ್ಯತೆಯಿದೆ ಎಂದೂ ಅವರು ನುಡಿದರು.
ಮತ್ತಷ್ಟು
ನೇತಾಜಿ 111ನೇ ಜನ್ಮದಿನ ಆಚರಣೆ
ಮಾಯಾವತಿ ಭದ್ರತೆಗೆ ಇಸ್ರೇಲ್ ತರಬೇತಿ
ತಸ್ಲೀಮಾಗೆ ಫ್ರೆಂಚ್ ಪ್ರಶಸ್ತಿಗೆ ಸರ್ಕಾರ ನಕಾರ
ಕೊಲೆ ಮಾಡಿದ್ದು ಆತ್ಮರಕ್ಷಣೆಗೆ ಎಂದು ಹೇಳಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ವಿಮಾನ ದುರಂತದಲ್ಲಿ ನೇತಾಜಿ ಬಲಿ:ವರದಿ ಬಹಿರಂಗ
ಪ.ಬಂಗಾಳದಲ್ಲಿ ಐವರಿಗೆ ಕೋಳಿಜ್ವರದ ಲಕ್ಷಣ?