ಶ್ವೇತ-ರಾಹುಲ್ ಮಹಾಜನ್ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ವರೆಗೆ ಗುರಗಾಂವ್ ಸೆಷನ್ಸ್ ಕೋರ್ಟ್ ಮುಂದೂಡಿದೆ. ರಾಹುಲ್ ಜತೆ ಸಂಬಂಧವನ್ನು ಸಾಧ್ಯವಾದಷ್ಟು ಬೇಗ ಕಡಿದುಕೊಳ್ಳಲು ಆಸಕ್ತರಾಗಿದ್ದ ಶ್ವೇತಾಗೆ ಇಂದಿನ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ವಿಚ್ಛೇದನಕ್ಕೆ ಶ್ವೇತ ಅರ್ಜಿ ಸಲ್ಲಿಸಿದ್ದರು ಮತ್ತು ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ವಿಚ್ಛೇದನ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಆದರೆ ರಾಹುಲ್ ಕೋರ್ಟ್ ವಿಚಾರಣೆಗೆ ಖುದ್ದಾಗಿ ಹಾಜರಾಗಲಿಲ್ಲ ಮತ್ತು ಸದಾ ಅವರ ವಕೀಲರು ರಾಹುಲ್ ಅವರನ್ನು ಪ್ರತಿನಿಧಿಸುತ್ತಿದ್ದರು.
ರಾಹುಲ್ ಅವರ ಹಿಂಸಾತ್ಮಕ ನಡವಳಿಕೆಯೇ ತಾವು ವಿಚ್ಛೇದನ ಅರ್ಜಿ ಸಲ್ಲಿಸಲು ಮುಖ್ಯಕಾರಣ ಎಂದು ಶ್ವೇತ ತಿಳಿಸಿದ್ದರು.ಸತತ ದೈಹಿಕ ದೌರ್ಜನ್ಯ ಮತ್ತು ನಿಂದನೆಗೆ ಒಳಗಾಗಿದ್ದಾಗಿ ಶ್ವೇತ ಆರೋಪಿಸಿದ್ದರು. ರಾಹುಲ್ ತಮಗೆ ಥಳಿಸಿರುವುದಾಗಿ ಇದಕ್ಕೆ ಮುಂಚೆ ಅವರು ವಾರಪತ್ರಿಕೆಯೊಂದಕ್ಕೆ ಹೇಳಿಕೆಗಳನ್ನು ನೀಡಿದ್ದರು.
|