ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾನಪದ ನೃತ್ಯೋತ್ಸವ ಲೋಕತರಂಗ ಉದ್ಘಾಟನೆ
PTI
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 6 ದಿನಗಳ ರಾಷ್ಟ್ರೀಯ ಜಾನಪದ ನೃತ್ಯೋತ್ಸವ ಲೋಕತರಂಗವನ್ನು ಗುರುವಾರ ಸಂಜೆ ಉದ್ಘಾಟಿಸಲಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತ ಖಾತೆ ಸಚಿವೆ ಅಂಬಿಕಾ ಸೋನಿ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಪಂಚಮಹಾಭೂತಗಳೆಂದು ಹೆಸರಾದ ಜೀವನದ ಐದು ಶಕ್ತಿಗಳಲ್ಲಿ ಒಂದಾಗ ಅಗ್ನಿಯನ್ನು ಉದ್ದೀಪನಗೊಳಿಸುವ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಪ್ರದರ್ಶನ ಆರಂಭವಾಗಲಿದೆ. 28 ರಾಜ್ಯಗಳಿಂದ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ 43 ಜಾನಪದ ನೃತ್ಯಗಳಿಗೆ 700 ಜಾನಪದ ನೃತ್ಯಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಜಾನಪದ ನೃತ್ಯಗಳ ಮೂಲಕ ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಉದ್ದೇಶದಿಂದ ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಉತ್ಸವವನ್ನು ಪ್ರತಿವರ್ಷ ಆಯೋಜಿಸುತ್ತಿದೆ.ರಾಷ್ಟ್ರದ ವಿವಿಧ ಭಾಗಗಳ ವರ್ಣರಂಜಿತ, ಸ್ಪಂದನಶೀಲ ಜಾನಪದ ನೃತ್ಯಗಳ ವೀಕ್ಷಣೆಗೆ ಈ ಸಮಾರಂಭವು ವಿಶಿಷ್ಠ ಅವಕಾಶವನ್ನು ಕಲ್ಪಿಸಿದೆ.
ಮತ್ತಷ್ಟು
ಶ್ವೇತ-ರಾಹುಲ್ ವಿಚ್ಛೇದನ ವಿಚಾರಣೆ ಮುಂದಕ್ಕೆ
ತಮಿಳುನಾಡು ರಾಜ್ಯದ ನದಿಗಳ ಜೋಡಣೆ
ಕೂಚ್‌ಬಿಹಾರ್, ಹೂಗ್ಲಿ ಕೋಳಿಜ್ವರ ಪೀಡಿತ
ನೇತಾಜಿ 111ನೇ ಜನ್ಮದಿನ ಆಚರಣೆ
ಮಾಯಾವತಿ ಭದ್ರತೆಗೆ ಇಸ್ರೇಲ್ ತರಬೇತಿ
ತಸ್ಲೀಮಾಗೆ ಫ್ರೆಂಚ್ ಪ್ರಶಸ್ತಿಗೆ ಸರ್ಕಾರ ನಕಾರ