ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಫಿಯಾ ಡಾನ್ ಬ್ರಜೇಶ್ ಸಿಂಗ್ ಬಂಧನ
ದೆಹಲಿ ಪೊಲೀಸರ ವಿಶೇಷ ದಳ ಮತ್ತು ಒರಿಸ್ಸಾ ಪೊಲೀಸರು ಗುರುವಾರ ಜಂಟಿಯಾಗಿ ನಡೆಸಿದ ದಿಟ್ಟ ಕಾರ್ಯಾಚರಣೆಯೊಂದರಲ್ಲಿ ಉತ್ತರಪ್ರದೇಶದ ದೊಡ್ಡ ಮಾಫಿಯಾ ಡಾನ್ ಬ್ರಜೇಶ್ ಸಿಂಗ್‌ನನ್ನು ಭುವನೇಶ್ವರ ವಿಮಾನನಿಲ್ದಾಣದಲ್ಲಿ ಬಂಧಿಸಿದೆ. ಬ್ರಜೇಶ್ ಪೂರ್ವ ಉತ್ತರಪ್ರದೇಶದ ಅಪರಾಧ ಜಗತ್ತನ್ನು ಅಕ್ಷರಶಃ ಆಳುತ್ತಿದ್ದ ಮತ್ತು ಇತ್ತೀಚೆಗೆ ತಮ್ಮ ಹತ್ಯೆಗೆ ಯತ್ನಿಸಿದ್ದಾನೆಂದು ಮುಖ್ಯಮಂತ್ರಿ ಮಾಯಾವತಿ ಆರೋಪಿಸಿದ್ದರು.

ಇಡೀ ಕಾರ್ಯಾಚರಣೆಯು ಪ್ರಮುಖ ಸಾಧನೆಯೇನೆಂದರೆ ಬ್ರಜೇಶ್ ಅವರ ನೈಜ ಛಾಯಾಚಿತ್ರ ಲಭ್ಯವಿರಲಿಲ್ಲ. ಕಳೆದ 20 ವರ್ಷಗಳಿಂದ ಅವನು ಅಕ್ಷರಶಃ ಅದೃಶ್ಯನಾಗಿದ್ದರೂ ಅವನ ಮಾಫಿಯಾ ಜಾಲದ ಉಪಸ್ಥಿತಿ ಎದ್ದುಕಾಣುತ್ತಿತ್ತು. ಅವನ ಹೆಸರಿನಲ್ಲಿ 100 ಕ್ರಿಮಿನಲ್ ಕೇಸುಗಳಿದ್ದವು.

ಥ್ರಿಲ್ಲರ್ ಚಿತ್ರದ ಸನ್ನಿವೇಶದ ರೀತಿಯಲ್ಲಿ ಬ್ರಜೇಶ್ ವಿಮಾನವನ್ನು ಏರುವಷ್ಟರಲ್ಲಿ ಪೊಲೀಸರು ಬಂಧಿಸಿದರು. ಅವನಿಂದ ನಕಲಿ ಪಾಸ್‌ಪೋರ್ಟ್ ಕೂಡ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ತನಿಖೆಯಲ್ಲಿ ಸಿಂಗ್ ಹತ್ಯೆ ಮತ್ತು ಒತ್ತೆಹಣಕ್ಕೆ ಸಂಬಂಧಪಟ್ಟಂತೆ 12 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಶಾಸಕ ಮುಕ್ತರ್ ಅನ್ಸಾರಿ ಬಳಿ ಸ್ವಲ್ಪ ಕಾಲ ಸಹಚರನಾಗಿ ಕೆಲಸ ಮಾಡುತ್ತಾ ಬ್ರಜೇಶ್ ಅಪರಾಧ ಜಗತ್ತಿಗೆ ಕಾಲಿರಿಸಿದ. ಅವರಿಂದ ಬೇರ್ಪಟ್ಟ ಬಳಿಕ ದಾವೂದ್ ಇಬ್ರಾಹಿಂ ಡಿ ಕಂಪನಿ ಜತೆ ನಂಟು ಕಲ್ಪಿಸಿಕೊಂಡು ಅವನಿಗೆ ಒತ್ತಾಸೆಯಾಗಿ ನಿಂತ. ಬಳಿಕ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಜತೆ ಸಂಪರ್ಕ ಸಾಧಿಸಿದ. ಸಿಂಗ್ ಬಂಧನದಿಂದ ಕೃಷ್ಣಾನಂದ ರಾಯ್ ಹತ್ಯೆ ಪ್ರಕರಣ ಸೇರಿದಂತೆ ಉನ್ನತ ಸ್ತರದ ನಿಗೂಢ ಕೇಸುಗಳು ಇತ್ಯರ್ಥವಾಗುವುದೆಂದು ಪೊಲೀಸರು ಆಶಿಸಿದ್ದಾರೆ.
ಮತ್ತಷ್ಟು
38 ಉಲ್ಫಾ ಉಗ್ರಗಾಮಿಗಳು ಸೇನೆಗೆ ಶರಣು
ಬಾರಕ್ ಕ್ಷಿಪಣಿ: ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
ಜಾನಪದ ನೃತ್ಯೋತ್ಸವ ಲೋಕತರಂಗ ಉದ್ಘಾಟನೆ
ಶ್ವೇತ-ರಾಹುಲ್ ವಿಚ್ಛೇದನ ವಿಚಾರಣೆ ಮುಂದಕ್ಕೆ
ತಮಿಳುನಾಡು ರಾಜ್ಯದ ನದಿಗಳ ಜೋಡಣೆ
ಕೂಚ್‌ಬಿಹಾರ್, ಹೂಗ್ಲಿ ಕೋಳಿಜ್ವರ ಪೀಡಿತ