ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶುಕ್ರವಾರ ಎಲ್ಲ ಬ್ಯಾಂಕ್ ನೌಕರರ ಮುಷ್ಕರ
ಭಾರತದ ಬ್ಯಾಂಕುಗಳ ವಿಲೀನ ಮತ್ತು ಕ್ರೋಢೀಕರಣ ಹಾಗೂ ಅಧಿಕ ಸಂಖ್ಯೆಯಲ್ಲಿ ವಿದೇಶಿ ಬ್ಯಾಂಕುಗಳ ಪ್ರವೇಶಕ್ಕೆ ವಿರೋಧಿಸಿ ಮತ್ತು ಮೂರನೇ ಸೌಲಭ್ಯವಾಗಿ ಪಿಂಚಣಿ ನೀಡಬೇಕೆಂದು ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳು ರಾಷ್ಟ್ರವ್ಯಾಪಿ ಒಂದು ದಿನದ ಮುಷ್ಕರವನ್ನು ಶುಕ್ರವಾರ ನಡೆಸಲಿದ್ದಾರೆ. ಸಾರ್ವಜನಿಕ, ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳ ಒಕ್ಕೂಟವಾದ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯು ಮುಷ್ಕರಕ್ಕೆ ಕರೆ ನೀಡಿದೆ.

ಎಸ್‌ಬಿಐ ಜತೆ ಸಹಾಯಕ ಬ್ಯಾಂಕುಗಳ ವಿಲೀನದಿಂದ ಬ್ಯಾಂಕ್ ಸಂಪನ್ಮೂಲ ಕ್ರೋಢೀಕರಣವಾಗಿ ಶಾಖೆಗಳ ಸಂಖ್ಯೆಯನ್ನು ತಗ್ಗಿಸುತ್ತದೆ. ಇದರಿಂದ ಬರೀ ಮಹಾನಗರಗಳಿಗೆ ಮಾತ್ರ ಅನುಕೂಲವಾಗುತ್ತದೆ ಹಾಗೂ ಗ್ರಾಮೀಣ ಪ್ರದೇಶಗಳು ನಿರ್ಲಕ್ಷ್ಯಕ್ಕೆ ಗುರಿಯಾಗುತ್ತದೆ ಎಂದು ಯುಎಫ್‌ಬಿಯು ಮಹಾರಾಷ್ಟ್ರ ಸಂಚಾಲಕ ದೋಪೇಶ್ವರಕರ್ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಸಹಾಯಕ ಬ್ಯಾಂಕುಗಳನ್ನು ಮಾತೃಸಂಸ್ಥೆ ಎಸ್‌ಬಿಐ ಜತೆ ವಿಲೀನ ಮಾಡುವ ಉದ್ದೇಶಿತ ಕ್ರಮದ ಹಿನ್ನೆಲೆಯಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. 2009ರಲ್ಲಿ ಅನೇಕ ವಿದೇಶಿ ಬ್ಯಾಂಕುಗಳು ರಾಷ್ಟ್ರಕ್ಕೆ ಲಗ್ಗೆ ಹಾಕುವ ನಿರೀಕ್ಷೆಯಿರುವುದರಿಂದ ಪ್ರಸಕ್ತ ಬ್ಯಾಂಕುಗಳ ಕೇಂದ್ರೀಕರಣವು ಏಕಸ್ವಾಮ್ಯಕ್ಕೆ ದಾರಿಕಲ್ಪಿಸಿ ಸ್ಪರ್ಧೆಯನ್ನು ತಗ್ಗಿಸುವುದಲ್ಲದೇ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಮಾಫಿಯಾ ಡಾನ್ ಬ್ರಜೇಶ್ ಸಿಂಗ್ ಬಂಧನ
38 ಉಲ್ಫಾ ಉಗ್ರಗಾಮಿಗಳು ಸೇನೆಗೆ ಶರಣು
ಬಾರಕ್ ಕ್ಷಿಪಣಿ: ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
ಜಾನಪದ ನೃತ್ಯೋತ್ಸವ ಲೋಕತರಂಗ ಉದ್ಘಾಟನೆ
ಶ್ವೇತ-ರಾಹುಲ್ ವಿಚ್ಛೇದನ ವಿಚಾರಣೆ ಮುಂದಕ್ಕೆ
ತಮಿಳುನಾಡು ರಾಜ್ಯದ ನದಿಗಳ ಜೋಡಣೆ