ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಭೇಟಿಗೆ ಫ್ರಾನ್ಸ್ ಅಧ್ಯಕ್ಷರ ಸಂತಸ
ಭಾರತಕ್ಕೆ ತಮ್ಮ ಭೇಟಿಯು ಉಭಯ ರಾಷ್ಟ್ರಗಳ ನಡುವೆ ಸಹಭಾಗಿತ್ವ ವೃದ್ಧಿಗೆ ನೆರವು ನೀಡುತ್ತದೆ ಎಂದು ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಶುಕ್ರವಾರ ತಿಳಿಸಿದ್ದಾರೆ. ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತನಾಗಿರುವ ನಾನು ಭಾರತಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದು ರಾಷ್ಟ್ರಪತಿ ಭವನದಲ್ಲಿ ಸರ್ಕಾರಿ ಗೌರವ ಸ್ವೀಕರಿಸಿದ ಬಳಿಕ ವರದಿಗಾರರಿಗೆ ತಿಳಿಸಿದರು.

ನಮಗೆ ನೀಡಿದ ಅಭೂತಪೂರ್ವ ಸ್ವಾಗತಕ್ಕೆ ನಾನು ಹೃದಯಪೂರ್ವಕ ವಂದನೆಯನ್ನು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಸಲ್ಲಿಸಿದ್ದೇನೆ ಎಂದು ಸಾರ್ಕೋಜಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, "ನಾವು ಫ್ರಾನ್ಸ್ ಅಧ್ಯಕ್ಷರನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ.

ಅವರ ಭೇಟಿಯು ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ" ಎಂದು ಹೇಳಿದರು.ಭಾರತವು ಫ್ರಾನ್ಸ್ ಜತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.ಸಾರ್ಕೋಜಿ ಅವರ ಎರಡು ದಿನಗಳ ಚೊಚ್ಚಲ ಭೇಟಿ ಸಂದರ್ಭದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಬಾಂಧವ್ಯ ವೃದ್ಧಿಗೆ ಉಭಯ ರಾಷ್ಟ್ರಗಳು ಚರ್ಚಿಸುವರೆಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
22 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಶುಕ್ರವಾರ ಎಲ್ಲ ಬ್ಯಾಂಕ್ ನೌಕರರ ಮುಷ್ಕರ
ಮಾಫಿಯಾ ಡಾನ್ ಬ್ರಜೇಶ್ ಸಿಂಗ್ ಬಂಧನ
38 ಉಲ್ಫಾ ಉಗ್ರಗಾಮಿಗಳು ಸೇನೆಗೆ ಶರಣು
ಬಾರಕ್ ಕ್ಷಿಪಣಿ: ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
ಜಾನಪದ ನೃತ್ಯೋತ್ಸವ ಲೋಕತರಂಗ ಉದ್ಘಾಟನೆ