ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಸ್ರೀನ್‌ರನ್ನು ಫ್ರಾನ್ಸ್‌ಗೆ ಆಹ್ವಾನಿಸಲು ನಿರ್ಧಾರ
PTI
ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಅವರ ಭೇಟಿಯ ಸಂದರ್ಭದಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ಫ್ರೆಂಚ್ ಪ್ರಶಸ್ತಿ ನೀಡುವ ಯೋಜನೆಯನ್ನು ಭಾರತ ತಡೆಹಿಡಿದ ಬಳಿಕ ನಸ್ರೀನ್ ಅವರನ್ನು ಆಹ್ವಾನಿಸಲು ಫ್ರಾನ್ಸ್ ನಿರ್ಧರಿಸಿದೆ. ನಸ್ರೀನ್ ಅವರನ್ನು ಫ್ರಾನ್ಸ್‌ಗೆ ಆಹ್ವಾನಿಸುವ ಮೂಲಕ ಅವರಿಗೆ ಸೈಮನ್ ಡಿ ಬೆವೋರ್ ಪ್ರಶಸ್ತಿಯನ್ನು ಅಧಿಕೃತವಾಗಿ ನೀಡುವಂತೆ ಸಾರ್ಕೋಜಿ ಆದೇಶಿಸಿದ್ದಾರೆ.

ಆದರೆ ಅವರಿಗೆ ಪ್ರಶಸ್ತಿ ನೀಡುವ ದಿನಾಂಕವನ್ನು ಫ್ರಾನ್ಸ್ ನಿರ್ದಿಷ್ಟವಾಗಿ ಪ್ರಕಟಿಸಲಿಲ್ಲ. ಮಹಿಳೆಯರ ಹಕ್ಕುಗಳನ್ನು ಬೆಂಬಲಿಸಿ ಬರೆದ ಲೇಖನಗಳಿಗೆ ಪ್ರಶಸ್ತಿ ಸ್ವೀಕರಿಸಲು ತಸ್ಲೀಮಾ ಅವರ ಪ್ರಯಾಣಕ್ಕೆ ಎಲ್ಲ ವ್ಯವಸ್ಥೆಯನ್ನು ಭಾರತ ಕಲ್ಪಿಸುವುದೆಂದು ಫ್ರಾನ್ಸ್ ನಿರೀಕ್ಷಿಸಿದೆ.

ಕಳೆದ ಜನವರಿ 9ರಂದು ಪ್ರಶಸ್ತಿಯನ್ನು ಪ್ರಕಟಿಸಿದ ಫ್ರಾನ್ಸ್ ಸಾರ್ಕೋಜಿ ಅವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ತಸ್ಲೀಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲು ಯೋಜಿಸಿದ್ದರು. ಆದರೆ ನಸ್ರೀನ್ ಲೇಖನಗಳ ಬಗ್ಗೆ ಕೊಲ್ಕತಾದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದರಿಂದ ಅದು ಪುನರಾವರ್ತಿಸಬಹುದೆಂಬ ಭಯದಲ್ಲಿ ಭಾರತ ಸ್ವದೇಶದಲ್ಲಿ ಪ್ರಶಸ್ತಿ ನೀಡುವುದನ್ನು ವಿರೋಧಿಸಿತ್ತು.
ಮತ್ತಷ್ಟು
ಭಾರತದ ಭೇಟಿಗೆ ಫ್ರಾನ್ಸ್ ಅಧ್ಯಕ್ಷರ ಸಂತಸ
22 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಶುಕ್ರವಾರ ಎಲ್ಲ ಬ್ಯಾಂಕ್ ನೌಕರರ ಮುಷ್ಕರ
ಮಾಫಿಯಾ ಡಾನ್ ಬ್ರಜೇಶ್ ಸಿಂಗ್ ಬಂಧನ
38 ಉಲ್ಫಾ ಉಗ್ರಗಾಮಿಗಳು ಸೇನೆಗೆ ಶರಣು
ಬಾರಕ್ ಕ್ಷಿಪಣಿ: ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ