ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಜರ್ ದಿನೇಶ್‌ಗೆ ಮರಣೋತ್ತರ ಅಶೋಕ ಚಕ್ರ
ತಮ್ಮ ಪ್ರಥಮ ಮಗುವಿನ ಮುಖದರ್ಶನ ಮಾಡುವುದಕ್ಕಾಗಿ ಊರಿಗೆ ಹೋಗಲು ಕೆಲವೇ ದಿನಗಳು ಉಳಿದಿದ್ದಾಗ ಕಾಶ್ಮೀರ ಕಣಿವೆಯಲ್ಲಿ ನುಸುಳಿದ ಉಗ್ರರ ವಿರುದ್ಧ ಹೋರಾಟಕ್ಕೆ ತಮ್ಮ ಸೈನಿಕರನ್ನು ಮುನ್ನಡೆಸಿ, ಉಗ್ರಗಾಮಿಗಳ ಜತೆ ಭೀಕರ ಕಾಳಗ ನಡೆಯುತ್ತಿದ್ದಾಗ ಗುಂಡಿನ ಚಕಮಕಿಯಲ್ಲಿ ಸಿಕ್ಕಿಬಿದ್ದ ಸಹೋದ್ಯೋಗಿಯ ಜೀವವುಳಿಸುವ ಭರದಲ್ಲಿ ಧೀರ ಮೇಜರ್ ದಿನೇಶ್ ರಘು ರಾಮನ್ ಜೀವ ಕಳೆದುಕೊಂಡರು.

30 ವರ್ಷ ಆಸುಪಾಸಿನಲ್ಲಿದ್ದ ದಿನೇಶ್ ರಘು ರಾಮನ್ ಅವರಿಗೆ ರಾಷ್ಟ್ರದ ಅತ್ಯುನ್ನತ ಶಾಂತಿಕಾಲದ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಿ ಪುರಸ್ಕರಿಸಲಾಯಿತು. ಕಾಶ್ಮೀರ ಕಣಿವೆಯಲ್ಲಿ ಕಳೆದ ವರ್ಷ ಉಗ್ರಗಾಮಿಗಳ ಜತೆ ಭೀಕರ ಕದನವೆಂದು ಪರಿಗಣಿಸಲಾದ ಈ ಹೋರಾಟದಲ್ಲಿ 9 ಮಂದಿ ಉಗ್ರಗಾಮಿಗಳು ಹತರಾದರು.

ಗಡಿ ನಿಯಂತ್ರಣ ರೇಖೆಯನ್ನು ದಾಟಿದ ಉಗ್ರಗಾಮಿಗಳು ಮನೆಯಲ್ಲಿ ಅಡಗಿದ್ದಾರೆಂಬ ಸುಳಿವಿನ ಮೇಲೆ ತಮ್ಮ ಪಡೆ ಮುತ್ತಿಗೆ ಹಾಕಿದ ವಿಷಯ ತಿಳಿದ ರಾಮನ್ ಗುಂಡಿನ ಕಾಳಗದ ಸ್ಥಳಕ್ಕೆ ಧಾವಿಸಿದರು. ಅನೇಕ ಮಂದಿ ಭಯೋತ್ಪಾದಕರನ್ನು ಕೊಂದ ಬಳಿಕ ಭಯೋತ್ಪಾದಕರ ಗುಂಡಿನ ಚಕಮಕಿಯಲ್ಲಿ ಸಿಕ್ಕಿಬಿದ್ದ ತಮ್ಮ ಸಹೋದ್ಯೋಗಿ ಕೆ.ಪಿ. ವಿನಯ್ ಅವರನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ತಮ್ಮ ಎದೆ ಮತ್ತು ಕಾಲುಗಳಿಗೆ ಗುಂಡುಗಳು ತಾಗಿ ಪ್ರಾಣತೆತ್ತರು.
ಮತ್ತಷ್ಟು
ಗುಂಡಿನ ಚಕಮಕಿ: ಬಶೀರ್ ಅಹ್ಮದ್ ಸಾವು
ನಸ್ರೀನ್‌ರನ್ನು ಫ್ರಾನ್ಸ್‌ಗೆ ಆಹ್ವಾನಿಸಲು ನಿರ್ಧಾರ
ಭಾರತದ ಭೇಟಿಗೆ ಫ್ರಾನ್ಸ್ ಅಧ್ಯಕ್ಷರ ಸಂತಸ
22 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಶುಕ್ರವಾರ ಎಲ್ಲ ಬ್ಯಾಂಕ್ ನೌಕರರ ಮುಷ್ಕರ
ಮಾಫಿಯಾ ಡಾನ್ ಬ್ರಜೇಶ್ ಸಿಂಗ್ ಬಂಧನ