ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾರ ಮಡಿಲಿಗೂ ಬೀಳದ ಭಾರತರತ್ನ
ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಈ ವರ್ಷ ಯಾರಿಗೂ ನೀಡದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಸತತವಾಗಿ ಏಳನೇ ವರ್ಷವಾದ ಈ ಬಾರಿ ಕೂಡ ಅತ್ಯುನ್ನತ ಪ್ರಶಸ್ತಿಯನ್ನು ಯಾರಿಗೂ ನೀಡದಿರಲು ನಿರ್ಧರಿಸಲಾಯಿತು. ಈ ಬಾರಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ನಾಯಕರಿಗೆ ಭಾರತರತ್ನ ನೀಡಿ ಗೌರವಿಸಬೇಕೆಂದು ಒತ್ತಾಯಿಸುವ ಮೂಲಕ ಭಾರತರತ್ನ ಚರ್ಚೆಯ ವಸ್ತುವಾಯಿತು.

ಈ ಹಿನ್ನೆಲೆಯಲ್ಲಿ ಪ್ರಮುಖ ವ್ಯಕ್ತಿಗೆ ಜೀವಂತ ಅಥವಾ ಮರಣೋತ್ತರ ಪ್ರಶಸ್ತಿ ನೀಡುವ ಸಂಭವನೀಯತೆಯನ್ನು ತಳ್ಳಿಹಾಕಲಾಯಿತು. ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದು ಮಾಜಿ ಪ್ರಧಾನಮಂತ್ರಿ, ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕೆಂದು ಸಲಹೆ ಮಾಡುವ ಮೂಲಕ ಭಾರತರತ್ನ ಪೈಪೋಟಿಗೆ ಮೊದಲಿಗೆ ನಾಂದಿ ಹಾಡಿದರು.

ಅದಾದ ಬಳಿಕ ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಮುಖಂಡರಿಗೇ ಭಾರತರತ್ನ ನೀಡಬೇಕೆಂದು ಒತ್ತಾಯಿಸುತ್ತಾ ಭಾರತರತ್ನಕ್ಕಾಗಿ ಸರತಿಸಾಲಿನಲ್ಲಿ ನಿಂತರು. ಚರಣ್ ಸಿಂಗ್,ಕಾನ್ಶಿರಾಂ, ಮುಲಾಯಂ ಸಿಂಗ್ ಯಾದವ್, ಕರುಣಾನಿಧಿ ಹೆಸರುಗಳು ಕೂಡ ಭಾರತರತ್ನಕ್ಕೆ ಶಿಫಾರಸು ಮಾಡಲಾಯಿತು. ಮಾಯಾವತಿ ಕಾನ್ಶಿರಾಂ ಹೆಸರನ್ನು ಪ್ರಸ್ತಾಪಿಸಿದರೆ, ಡಿಎಂಕೆ ಕರುಣಾನಿಧಿಗೆ ಭಾರತರತ್ನ ನೀಡಿ ಪುರಸ್ಕರಿಸಬೇಕೆಂದು ಆಗ್ರಹಿಸಿತು.

ಇವೆಲ್ಲ ಗೊಂದಲಗಳಿಂದ ಬೇಸತ್ತ ಸರ್ಕಾರ ಭಾರತರತ್ನ ಅತ್ಯುಚ್ಛ ಪ್ರಶಸ್ತಿಯನ್ನು ಯಾರಿಗೂ ನೀಡದಿರಲು ನಿರ್ಧರಿಸುವ ಮೂಲಕ ವಿವಾದದ ಕಿಡಿಯಿಂದ ಪಾರಾಗಿದೆ.
ಮತ್ತಷ್ಟು
ಮೇಜರ್ ದಿನೇಶ್‌ಗೆ ಮರಮೋತ್ತರ ಅಶೋಕ ಚಕ್ರ
ಗುಂಡಿನ ಚಕಮಕಿ: ಬಶೀರ್ ಅಹ್ಮದ್ ಸಾವು
ನಸ್ರೀನ್‌ರನ್ನು ಫ್ರಾನ್ಸ್‌ಗೆ ಆಹ್ವಾನಿಸಲು ನಿರ್ಧಾರ
ಭಾರತದ ಭೇಟಿಗೆ ಫ್ರಾನ್ಸ್ ಅಧ್ಯಕ್ಷರ ಸಂತಸ
22 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ಶುಕ್ರವಾರ ಎಲ್ಲ ಬ್ಯಾಂಕ್ ನೌಕರರ ಮುಷ್ಕರ