ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ಭೇದಿಸಿರುವ ಮೊರಾದಾಬಾದ್ ಪೊಲೀಸರ ತಂಡ ಗುರುವಾರ ಒಬ್ಬ ವೈದ್ಯ, ಡೋಂಗಿ ವೈದ್ಯ ಮತ್ತು ಮೂವರನ್ನು ಗುರುವಾರ ಬಂಧಿಸಿದೆ. ಈ ಅಕ್ರಮ ಜಾಲಕ್ಕೆ ಬಲಿಯಾದ ದುರ್ದೈವಿಗಳು ಪಶ್ಚಿಮ ಉತ್ತರಪ್ರದೇಶದ ಬಡಕುಟುಂಬಕ್ಕೆ ಸೇರಿದವರು. ಬಲ್ಲಾಬ್‌ಗರ್‌ನ ಎಂಬಿಬಿಎಸ್ ಪದವೀಧರ ಉಪೇಂದ್ರ, ಇನ್ನೊಬ್ಬ ಡೋಂಗಿ ವೈದ್ಯ ಜಗದೀಶ್ ಮತ್ತು ಮೂವರು ಸಂಗಡಿಗರನ್ನು ಮನೆಯೊಂದರ ಮೇಲೆ ದಾಳಿ ಮಾಡಿ ಬಂಧಿಸಲಾಯಿತು.
ಆಗ್ರಾ, ಹಾಪುರ್ ಮತ್ತು ಗಾಜಿಯಾಬಾದ್ ಜಿಲ್ಲೆಗಳಿಗೆ ಸೇರಿದ ಮೂವರು ರೋಗಿಗಳ ಮೂತ್ರಪಿಂಡಗಳನ್ನು ಅವರ ಅರಿವಿಗೆ ಬಾರದಂತೆ ತೆಗೆದಿರುವ ಆರೋಪ ಅವರ ಮೇಲೆ ಹೊರಿಸಲಾಗಿದೆ. ಸುಮಾರು ಆರೇಳು ವರ್ಷಗಳಿಂದ ಅವರು ಅಕ್ರಮ ಅಂಗಾಂಗ ಕಸಿ ಜಾಲವನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ.
ಈ ಜಾಲಕ್ಕೆ ಬಲಿಯಾದ ರೋಗಿಗಳ ಹೆಸರನ್ನು ಬಹಿರಂಗಮಾಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಜಾಲದಲ್ಲಿ ಅಂತಾರಾಷ್ಟ್ರೀಯ ಜಾಲದ ಕೈವಾಡವನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ಹೇಳಿವೆ.
|