ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಹೆಸರಾಂತ ಪರ್ವತಾರೋಹಿ ಎಡ್ಮಂಡ್ ಹಿಲೇರಿ ಮತ್ತು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಈ ಬಾರಿ ಗಣರಾಜ್ಯೋತ್ಸವ ದಿನದ ಅಂಗವಾಗಿ ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೆ ಪುರಸ್ಕೃತರಾದ 13 ಜನರಲ್ಲಿ ಸೇರಿದ್ದಾರೆ. ಪದ್ಮಭೂಷಣ ಪ್ರಶಸ್ತಿಗೆ ಖ್ಯಾತ ಹಿನ್ನೆಲೆ ಗಾಯಕಿ ಪಿ, ಸುಶೀಲ ಮತ್ತು ಭಾರತೀಯ ಸಂಜಾತ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಪಾತ್ರರಾಗಿದ್ದಾರೆ.
ಗಾಯಕಿ ಆಶಾಬೋಸ್ಲೆ, ನೊಬೆಲ್ ಪ್ರಶಸ್ತಿ ವಿಜೇತ ಹೆಸರಾಂತ ಪರಿಸರ ತಜ್ಞ ಆರ್.ಕೆ. ಪಚೌರಿ, ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ದೆಹಲಿ ಮೆಟ್ರೋ ಮುಖ್ಯಸ್ಥ ಈ. ಶ್ರೀಧರನ್, ಮಾಜಿ ಆಡಳಿತಾಧಿಕಾರಿ ಪಿ.ಎನ್. ಧರ್, ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ, ಉಕ್ಕು ದೊರೆ ಎಲ್.ಎನ್. ಮಿಟ್ಟಲ್ ಮತ್ತು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಆನಂದ್ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪುರಸ್ಕೃತರಾದ ಇತರ ಗಣ್ಯರು.
ಪದ್ಮಭೂಷಣ ಪ್ರಶಸ್ತಿಗಳು ಮತ್ತು 71 ಪದ್ಮಶ್ರೀ ಪ್ರಶಸ್ತಿಗಳನ್ನು ಈ ವರ್ಷ ವಿತರಿಸಲಾಗುವುದು. ಸತತವಾಗಿ 7ನೇ ವರ್ಷ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನಕ್ಕೆ ಈ ಬಾರಿ ಯಾರ ಹೆಸರನ್ನೂ ಹೆಸರಿಸಿಲ್ಲ.
|