ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿನ ಕೋಳಿ ಸಂಹಾರ ಪ್ರಭಾವಕ್ಕೊಳಗಾಗಿದೆ. ಪುರಿಲಿಯ ಮತ್ತು ಹೊವ್ರ್ಹಾ ಜಿಲ್ಲೆಗಳಲ್ಲಿ ಇನ್ನೂ ಕೋಳಿ ಸಂಹಾರ ಕಾರ್ಯಚರಣೆ ಪ್ರಾರಂಭವಾಗಿಲ್ಲ.
ಪುರಿಲಿಯದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಿದ್ದ ವಧೆ ಕಾರ್ಯಚರಣೆ ಅಕಾಲಿಕ ಮಳೆಯ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ಸಂತೂರಿ ಬ್ಲಾಕ್‌ನ ಕೊಟಾಲ್ಡಿ ಮತ್ತು ರಾಂಚಂದ್ರಪುರ್ ಗ್ರಾಮಗಳಲ್ಲಿ ಕೋಳಿ ಹತ್ಯೆ ಕಾರ್ಯಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಲಾ 10 ಸದಸ್ಯರುಗಳನ್ನು ಹೊಂದಿರುವ 4 ತಂಡಗಳು ಸಂತುರಿ ಬ್ಲಾಕುಗಳನ್ನು ತಲುಪಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ರಂಜನ್ ಕಾರ್ ತಿಳಿಸಿದ್ದಾರೆ.
ಪುರುಲಿಯಾ ಮತ್ತು ಹೊವ್ರ್ಹಾ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಇರುವಿಕೆ ದೃಢಪಟ್ಟಿದ್ದು, ಪಶ್ಚಿಮ ಬಂಗಾಳದ 19 ಜಿಲ್ಲೆಗಳಲ್ಲಿ 11ರಲ್ಲಿ ಹಕ್ಕಿ ಜ್ವರ ತನ್ನ ಕದಂಬ ಬಾಹುವನ್ನು ಬಿಗಿಗೊಳಿಸಿದೆ.
|