ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್‌ಮಹಲ್ ನೋಡಲು ಮತ್ತೊಮ್ಮೆ ಬರುವೆ: ಸರ್ಕೋಜಿ
ತಮ್ಮ ಗೆಳತಿ ಕಾರ್ಲಾ ಬ್ರೂನಿ ಇಲ್ಲದೆಯೇ ಶನಿವಾರ ಸಂಜೆ ತಾಜ್‌ಮಹಲ್ ವೀಕ್ಷಿಸಿದ ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರಿಗೆ ಮತ್ತೊಮ್ಮೆ ಗೆಳತಿಯ ಜತೆಗೆ ತಾಜ್ ಮಹಲ್ ವೀಕ್ಷಿಸಬೇಕೆಂಬಾಸೆ. 17ನೇ ಶತಮಾನದ ಈ ಪ್ರೇಮ ಸೌಧಕ್ಕೆ ಮಾಜಿ ಸೂಪರ್‌ಮಾಡೆಲ್ ಬ್ರೂನಿ ಅವರು ಫ್ರೆಂಚ್ ಅಧ್ಯಕ್ಷರನ್ನು ಸೇರಿಕೊಳ್ಳುತ್ತಾರೆ ಎಂಬ ಊಹೆಗಳು ಶನಿವಾರ ಸುಳ್ಳಾಗಿದ್ದವು.

ಗಣರಾಜ್ಯೋತ್ಸವ ವಿಶೇಷ ಅತಿಥಿಯಾಗಿ ಭಾರತಕ್ಕೆ ಬಂದಿದ್ದ ಸರ್ಕೋಜಿ ಅವರ ಜತೆಗೆ ಬ್ರೂನಿ ಇದ್ದಲ್ಲಿ ಅದು ಶಿಷ್ಟಾಚಾರಕ್ಕೆ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಭಾರತ ಆಕ್ಷೇಪ ಒಡ್ಡಿತ್ತು. ಈ ಕಾರಣಕ್ಕೆ ಸರ್ಕೋಜಿ ಜತೆಗೆ ಅವರ ಗೆಳತಿ ಬ್ರೂನಿ ಬಂದಿರಲಿಲ್ಲ.

ಹೆಚ್ಚಿನ ವಿದೇಶೀ ಗಣ್ಯರು ತಾಜ್‌ಮಹಲ್‌ಗೆ ಭೇಟಿ ನೀಡುವುದು ಸಾಮಾನ್ಯವೇ ಆಗಿದ್ದರೂ, ಈ ಬಾರಿ ಮಾಧ್ಯಮದ ಮಂದಿಗೆ ಹೆಚ್ಚು ಆಸಕ್ತಿಯಿತ್ತು. ಕಾರಣವೆಂದರೆ ಅವರ ಜತೆಗೆ ಅವರ 40ರ ಹರೆಯದ ಪ್ರೇಯಸಿ ಇರುತ್ತಾರೆಯೇ ಎಂಬ ಕುತೂಹಲ.

ಆದರೆ ತಾಜ್ ನೋಡಲು ಮತ್ತೊಮ್ಮೆ ಬರುವುದಾಗಿ ತಿಳಿಸಿರುವ ಫ್ರಾನ್ಸ್ ಅಧ್ಯಕ್ಷರು ಭಾರವಾದ ಹೃದಯದೊಂದಿಗೆಯೇ ಫ್ರಾನ್ಸ್‌ಗೆ ಮರಳಿದ್ದಾರೆ.
ಮತ್ತಷ್ಟು
ಕೋಳಿ ಸಂಹಾರಕ್ಕೆ ವರುಣನ ಅಡ್ಡಿ
ದುರ್ಬಲ ವರ್ಗಗಳಿಗೆ ತಲುಪದ ಅಭಿವೃದ್ಧಿ: ರಾಷ್ಟ್ರಪತಿ ವಿಷಾದ
ಮೂರ್ತಿ, ಪಿ.ಸುಶೀಲ, ಸಚಿನ್‌ಗೆ ಪದ್ಮ ಪ್ರಶಸ್ತಿ
ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ
ಅಕ್ರಮ ಮೂತ್ರಪಿಂಡ ಕಸಿ ಜಾಲ ಬಯಲು
ಯಾರ ಮಡಿಲಿಗೂ ಬೀಳದ ಭಾರತರತ್ನ