ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿ: ರಾಜನಾಥ್
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ವಿಜಯಕ್ಕೆ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರುವುದೇ ಕಾರಣ ಎಂಬಂತೆ ಮಾತನಾಡಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಭಾನುವಾರ ಆರಂಭವಾದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾಡಿದ ಭಾಷಣದ ಬಹುತೇಕ ಭಾಗ ಆಡ್ವಾಣಿ-ಕೇಂದ್ರಿತವಾಗಿತ್ತು.

ಡಿಸೆಂಬರ್-2007 ಅತ್ಯಂತ ಮಹತ್ವದ ಮಾಸವಾಗಿದ್ದು, ಆಡ್ವಾಣಿಯನ್ನು ನಮ್ಮ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದೆವು. ಅದೇ ತಿಂಗಳ ಕೊನೆಯಸಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಪಕ್ಷಕ್ಕೆ ಭರ್ಜರಿ ವಿಜಯ ದೊರೆಯಿತು ಎಂದು ಹೇಳಿದ ರಾಜನಾಥ್ ಸಿಂಗ್, ಪಕ್ಷದ ಉನ್ನತಿಗೆ ಆಡ್ವಾಣಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಇದಕ್ಕೆ ಮುನ್ನ, ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ಸಹಿತ ನಾಲ್ಕು ರಾಜ್ಯಗಳ ಅಧಿಕಾರ ಹಿಡಿದಾಗಿದೆ. ಇದೇ ಸ್ಫೂರ್ತಿಯಿಂದ ಒಗ್ಗಟ್ಟಿನಲ್ಲಿ ಹೋರಾಡಿ ಕೇಂದ್ರದಲ್ಲಿ ಮತ್ತು ಮುಂಬರಲಿರುವ ಎಂಟು ರಾಜ್ಯಗಳಲ್ಲೂ ಅಧಿಕಾರ ಹಿಡಿಯಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಎಲ್ಲಾ ರಂಗದಲ್ಲಿಯೂ ವಿಫಲವಾಗಿರುವ ಯುಪಿಎ ಸರಕಾರದ ವೈಫಲ್ಯಗಳನ್ನು ಜನತೆಗೆ ಎತ್ತಿ ತೋರಿಸಿ ಎಂದು ಕಾರ್ಯಕರ್ತರನ್ನು ಕೋರಿದ ಅವರು, ವಿಜಯಿಯಾಗಲು ಸವಾಲುಗಳನ್ನು ಸುವರ್ಣ ಅವಕಾಶಗಳಾಗಿ ಪರವರ್ತಿಸುವ ಕೆಲಸ ಪಕ್ಷದ ಮುಂದಿದೆ ಎಂದು ನುಡಿದರು.
ಮತ್ತಷ್ಟು
ಅಣು ಒಪ್ಪಂದಕ್ಕೆ ಸಂಸತ್ ಅಂಗೀಕಾರ ಬೇಕಿಲ್ಲ: ಸುಪ್ರೀಂ ಕೋರ್ಟ್
ತಾಜ್‌ಮಹಲ್ ನೋಡಲು ಮತ್ತೊಮ್ಮೆ ಬರುವೆ: ಸರ್ಕೋಜಿ
ಕೋಳಿ ಸಂಹಾರಕ್ಕೆ ವರುಣನ ಅಡ್ಡಿ
ದುರ್ಬಲ ವರ್ಗಗಳಿಗೆ ತಲುಪದ ಅಭಿವೃದ್ಧಿ: ರಾಷ್ಟ್ರಪತಿ ವಿಷಾದ
ಮೂರ್ತಿ, ಪಿ.ಸುಶೀಲ, ಸಚಿನ್‌ಗೆ ಪದ್ಮ ಪ್ರಶಸ್ತಿ
ಪರಮಾಣು ಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ