ಉತ್ತರಪ್ರದೇಶದಲ್ಲಿ ಉದ್ದೇಶಿತ ವಿದ್ಯಾರ್ಥಿನಿಯರ ಕಾಲೇಜು ಸೇರಿದಂತೆ ಲಕ್ನೊದಲ್ಲಿರುವ ಅಮರಸಿಂಗ್ ಅವರ ನೂತನ ಗೃಹಕ್ಕೆ ಕೂಡ ಬಾಲಿವುಡ್ ನಟಿ ಮತ್ತು ಅಮರ್ಸಿಂಗ್ ಸ್ನೇಹಿತ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ಹೆಸರನ್ನು ಇಡಲಾಗಿದೆ.
ಅಮರ್ಸಿಂಗ್ ಅವರು ಲಕ್ನೊದ ಪೇಟೆ ವಿಪುಲ್ ಖಂಡ್ನಲ್ಲಿ ತಾವು ನೂತನವಾಗಿ ನಿರ್ಮಿಸಿದ ಬಂಗ್ಲೆಗೆ ಬಚ್ಚನ್ ಕುಟುಂಬವನ್ನು ಶನಿವಾರ ಸಂಜೆ ಕರೆದುಕೊಂಡು ಹೋದಾಗ ಇದು ಬೆಳಕಿಗೆ ಬಂತು. ಅಮಿತಾಬ್ ಬಚ್ಚನ್ ಮತ್ತು ಅವರ ಇಡೀ ಕುಟುಂಬವನ್ನು ಲಕ್ನೊ ವಿಮಾನನಿಲ್ದಾಣದಿಂದ ನೇರವಾಗಿ ಐಶ್ವರ್ಯಕ್ಕೆ ಕರೆದುಕೊಂಡು ಹೋದ ಬಳಿಕ ಅಲ್ಲಿ ಅವರಿಗೆ ಭೋಜನಕೂಟದ ನಂತರ ರಾತ್ರಿ ನೂತನ ಗೃಹದಲ್ಲೇ ಕಳೆದರು.
ಮನೆಗೆ ಐಶ್ವರ್ಯ ಎಂದು ಹೆಸರಿಟ್ಟಿರುವ ಬಗ್ಗೆ ವರದಿಗಾರರೊಬ್ಬರು ಪ್ರಶ್ನಿಸಿದಾಗ, ಅಭಿಷೇಕ್ ನನಗೆ ಮಗನಿದ್ದಂತೆ, ಮತ್ತು ಐಶ್ವರ್ಯ ನನ್ನ ಸೊಸೆ. ಆದ್ದರಿಂದ ಮನೆಗೆ ಅವರ ಹೆಸರನ್ನು ಇಟ್ಟರೆ ಮತ್ತು ಅವರಿಗೆ ಉಡುಗೊರೆಯಾಗಿ ಮನೆಯನ್ನು ನೀಡಲು ನಿರ್ಧರಿಸಿದರೆ ತೊಂದರೆಯೇನು? ಎಂದು ಅವರು ಪ್ರಶ್ನಿಸಿದರು. ಐಶ್ವರ್ಯ ಲಕ್ಷ್ಮಿ ದೇವತೆಯ ಇನ್ನೊಂದು ಹೆಸರು ಎನ್ನುವುದನ್ನು ಕೂಡ ನೀವು ತಿಳಿದಿರಬೇಕೆಂದು ಹೇಳಿದರು.
|