ರಾಮಸೇತು ಅಥವಾ ಅಡಾಮ್ಸ್ ಬ್ರಿಡ್ಜ್ ರಾಷ್ಟ್ರೀಯ ಪರಂಪರೆಯ ಸ್ಮಾರಕ ಎಂದು ಘೋಷಿಸಲು ಸೂಕ್ತ ಪ್ರಾಧಿಕಾರಗಳನ್ನು ಸಂಪರ್ಕಿಸಬೇಕೆಂದು ಸುಪ್ರೀಂಕೋರ್ಟ್ ಸೋಮವಾರ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೂಚಿಸಿದೆ.
ನಿರ್ದಿಷ್ಟ ಸ್ಮಾರಕವು ರಾಷ್ಟ್ರೀಯ ಪರಂಪರೆಯೋ ಅಲ್ಲವೋ ಎನ್ನುವುದನ್ನು ನಿರ್ಧರಿಸುವುದು ಕೋರ್ಟ್ ಕೆಲಸವಲ್ಲ ಎಂದು ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಾಧೀಶರಾದ ತರುಣ್ ಚಟರ್ಜಿ ಮತ್ತು ಆರ್.ವಿ. ರವೀಂದ್ರನ್ ಅವರಿದ್ದ ಪೀಠವು ಎಐಎಡಿಎಂಕೆ ವರಿಷ್ಠೆಯ ವಕೀಲರಿಗೆ ತಿಳಿಸಿದರು.
ಅರ್ಜಿದಾರರು ಸೂಕ್ತಪ್ರಾಧಿಕಾರವನ್ನು ಈ ಉದ್ದೇಶಕ್ಕಾಗಿ ಸಂಪರ್ಕಿಸಬೇಕೆಂದು ಅವರು ಹೇಳಿದರು.ರಾಮಸೇತುವನ್ನು ನಾಶಪಡಿಸದೇ ಪರ್ಯಾಯ ಮಾರ್ಗಗಳನ್ನು ಹಿಡಿಯುವಂತೆ ಸೇತುಸಮುದ್ರಂ ನಿಗಮಕ್ಕೆ ಆದೇಶ ನೀಡುವಂತೆ ಜಯಲಲಿತಾ ತಮ್ಮ ಅರ್ಜಿಯಲ್ಲಿ ಕೋರ್ಟ್‌ಗೆ ತಿಳಿಸಿದ್ದರು.
ಹೂಳೆತ್ತುವ ಕಾರ್ಯಾಚರಣೆಯಲ್ಲಿ ರಾಮಸೇತುವನ್ನು ಯಾವುದೇ ರೀತಿಯಲ್ಲಿ ನಾಶಮಾಡದಂತೆ ಸುಪ್ರೀಂಕೋರ್ಟ್ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
|