ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಲ್ಪಸಂಖ್ಯಾತರ ಓಲೈಕೆಗೆ ಬಿಜೆಪಿ ಖಂಡನೆ
PTI
ಯುಪಿಎ ಸರ್ಕಾರದ ಅಲ್ಪಸಂಖ್ಯಾತ ಓಲೈಕೆ ನೀತಿಗಳ ಬಗ್ಗೆ ಬಿಜೆಪಿ ತೀವ್ರವಾಗಿ ಟೀಕಾಪ್ರಹಾರ ಹರಿಸಿದೆ. ಅಲ್ಪಸಂಖ್ಯಾತರಿಗೆ ಬ್ಯಾಂಕ್ ಸಾಲದಲ್ಲಿ ಪ್ರತ್ಯೇಕ ಕೋಟಾ ಮತ್ತು ನೈಸರ್ಗಿಕ ಸಂಪನ್ಮೂಲಗಳಲ್ಲಿ ಪ್ರಥಮ ಹಕ್ಕು ನೀಡುವ ಕ್ರಮವನ್ನು ತಪ್ಪಿಸಲು ಪಕ್ಷವು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂದು ಅದು ಎಚ್ಚರಿಸಿದೆ.ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಲ್ಪಸಂಖ್ಯಾತ ಪದವನ್ನು ಕಾನೂನುಬದ್ಧವಾಗಿ ಮರುವ್ಯಾಖ್ಯಾನ ಮಾಡುವಂತೆ ಮತ್ತು ಅದು ಯಾವ ಕ್ಷೇತ್ರಗಳಲ್ಲಿ ಅನ್ವಯವಾಗುತ್ತದೆ ಎಂದು ನಿರ್ಧರಿಸುವಂತೆ ತಿಳಿಸಿದರು.

ಮುಸ್ಲಿಂ ಸಮುದಾಯಕ್ಕೆ ನೈಸರ್ಗಿಕ ಸಂಪನ್ಮೂಲಗಳಲ್ಲಿ ಪ್ರಥಮ ಹಕ್ಕು ನೀಡಬೇಕೆಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಹೇಳಿಕೆ ನಿಜಕ್ಕೂ ಆಘಾತಕಾರಿ ಎಂದು ಅವರು ನುಡಿದರು. ಪಂಚವಾರ್ಷಿಕ ಯೋಜನೆಯ ಚರ್ಚೆಗೆ ಕರೆಯಲಾದ ರಾಷ್ಟ್ರೀಯ ಅಭಿವೃದ್ಧಿಮಂಡಳಿ ಸಭೆಯಲ್ಲಿ ಕೋಮು ಆಧಾರಿತ ಆಯವ್ಯಯ ಮಂಡನೆಗೆ ಸರ್ಕಾರ ತೀವ್ರ ಆಸಕ್ತಿತವಾಗಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಗೆ ಮೀಸಲಾದ ನಿಧಿ ಮತ್ತು ಬ್ಯಾಂಕ್ ಸಾಲಗಳಲ್ಲಿ ಪ್ರತ್ಯೇಕ ಕೋಮು ಕೋಟಾ ಮಂಜೂರಾತಿಗೆ ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಅವರು ನುಡಿದರು. ಇಂತಹ ಕ್ರಮಗಳ ವಿರುದ್ಧ ಬಿಜೆಪಿ ಯಾವುದೇ ಹಂತಕ್ಕಾದರೂ ಹೋಗಿ ತಪ್ಪಿಸುತ್ತದೆ. ಸಮಾಜದ ಪ್ರತಿಯೊಂದು ವರ್ಗವನ್ನೂ ಅಭಿವೃದ್ಧಿಪಡಿಸಬೇಕೆಂದು ಬಿಜೆಪಿ ಬಯಸುತ್ತದೆ.ಅಭಿವೃದ್ಧಿಗೆ ಯಾವುದೇ ಕೋಮು ಬಣ್ಣ ನೀಡುವುದನ್ನು ಖಂಡನೀಯ ಎಂದು ಅವರು ನುಡಿದರು.
ಮತ್ತಷ್ಟು
ರಾಮಸೇತು:ಸೂಕ್ತ ಪ್ರಾಧಿಕಾರ ಸಂಪರ್ಕಕ್ಕೆ ಸೂಚನೆ
ಸಿಲಿಂಡರ್ ಸ್ಫೋಟಿಸಿ ಮೂರು ಮಕ್ಕಳ ಸಾವು
ಸೇನಾ ಪದಕ ಪುರಸ್ಕೃತರಾದ ಸೇನಾಧಿಕಾರಿ ಹತ್ಯೆ
ಅಮರ್‌ಸಿಂಗ್ ಮನೆಗೆ ಐಶ್ವರ್ಯ ರೈ ಹೆಸರು
ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಜ್ಜಾಗಿ: ರಾಜನಾಥ್
ಅಣು ಒಪ್ಪಂದಕ್ಕೆ ಸಂಸತ್ ಅಂಗೀಕಾರ ಬೇಕಿಲ್ಲ: ಸುಪ್ರೀಂ ಕೋರ್ಟ್