ಕಳೆದ ವರ್ಷ ನಂದಿಗ್ರಾಮದಲ್ಲಿ 14 ಜನರ ಸಾವಿಗೆ ಕಾರಣವಾದ ಪೊಲೀಸ್ ಗೋಲಿಬಾರ್ ಅನ್ಯಾಯದ ಕ್ರಮವಾಗಿದೆ ಎಂಬ ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮಬಂಗಾಲ ಸರಕಾರವು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯವು ಮೂರು ವಾರಗಳ ಕಾಲ ಮುಂದಕ್ಕೆ ದೂಡಿದೆ.
ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮಂದೂಡಿತು.
ಮಾರ್ಚ್ 14ರ ಗೋಲಿಬಾರ್ ಕುರಿತು ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲು ಸಿಬಿಐಗೆ ನ್ಯಾಯಾಲಯವು ಡಿಸೆಂಬರ್ 13ರಂದು ತಡೆ ಹಾಕಿತ್ತು.
ನಂದಿಗ್ರಾಮದಲ್ಲಿ ಮುಗ್ಧ ಜನರ ಮೇಲೆ ಪೊಲೀಸ್ ಅಧಿಕಾರಿಗಳು ನಡೆಸಿದ ಗೋಲಿಬಾರ್ ಅನ್ಯಾಯದ ಕ್ರಮವಾಗಿದ್ದು ಗೋಲಿಬಾರ್‌ನಿಂದ ಸಾವಿಗೀಡಾದ ಪ್ರತಿ ಕುಟುಂಬಕ್ಕೂ ತಲಾ ಐದು ಲಕ್ಷ ಪರಿಹಾರ ನೀಡುವಂತೆ ಮತ್ತು ಗಾಯಗೊಂಡ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮ ಬಂಗಾಲ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅಹವಾಲು ಸಲ್ಲಿಸಿತ್ತು.
|