ಕೇರಳದ ಮಾಜಿ ಸಚಿವ ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷದ ನಾಯಕ ಬೇಬಿ ಜಾನ್ ಅವರು ದೀರ್ಘಕಾಲದ ಅನಾರೋಗ್ಯದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಜಾನ್ ಅವರಿಗೆ ಪತ್ನಿ ಅಣ್ಣಮ್ಮಾ, ಪುತ್ರಿ ಶೀಲಾ ಮತ್ತು ಪುತ್ರರಾದ ಶಿಬು ಮತ್ತು ಶಾಜಿ ಇದ್ದಾರೆ. ಕಳೆದ 10 ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದ ಜಾನ್ ಜ.23ರಂದು ನ್ಯುಮೋನಿಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ತರುವಾಯ ಮಿದುಳಿನ ಆಘಾತದಿಂದ ನಿಧನರಾದರು.
ಕೇರಳ ವಿಧಾನಸಭೆಗೆ 11 ಬಾರಿ ಆಯ್ಕೆಯಾಗಿದ್ದ ಅವರು ಅಚ್ಯುತಾನಂದನ್, ಕರುಣಾಕರನ್, ವಾಸುದೇವನ್ ನಾಯರ್ ಮತ್ತು ಇ.ಕೆ. ನಯನಾರ್ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಂದಾಯ, ಕಾರ್ಮಿಕ, ಶಿಕ್ಷಣ ಮತ್ತು ಅಬ್ಕಾರಿ ಮುಂತಾದ ಪ್ರಮುಖ ಖಾತೆಗಳನ್ನು ಅವರು ಹೊಂದಿದ್ದರು. ನೀಂದಕಾರಾದಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಜಾನ್ ಶಾಲಾ ದಿನಗಳಲ್ಲೇ ರಾಜಕೀಯಕ್ಕೆ ಧುಮುಕಿ, ಕಾಂಗ್ರೆಸ್ ಪರ ಆಂದೋಳನಗಳಲ್ಲಿ ಪಾಲ್ಗೊಂಡಿದ್ದರು.
|