ಕೆಲವು ಶಸ್ತ್ರಸಜ್ಜಿತ ನಕ್ಸಲೀಯರ ತಂಡವು ಚಂದ್ರಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಮ್ಡಾ ಮಾರುಕಟ್ಟೆ ಪ್ರದೇಶದಲ್ಲಿ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಸುಮಾರು 100 ನಕ್ಸಲೀಯರ ತಂಡವು ಮಾರುಕಟ್ಟೆ ಪ್ರದೇಶಕ್ಕೆ ಧಾವಿಸಿ ವಿಷ್ಣುದೇವ್ ಮತ್ತು ಸುಖದೇವ್ ಅವರ ಮನೆಗಳನ್ನು ಸುತ್ತುವರಿದರು. ಅವರನ್ನು ಮನೆಗಳಿಂದ ಹೊರಗೆಳೆದ ನಕ್ಸಲೀಯರು ಅವರತ್ತ ಒಂದೇಸಮನೇ ಗುಂಡುಹಾರಿಸಿದಾಗ ಇಬ್ಬರೂ ಸ್ಥಳದಲ್ಲೇ ಸತ್ತಿದ್ದಾರೆ.
ಈ ದಾಳಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ನಕ್ಸಲೀಯರನ್ನು ಹಿಡಿಯಲು ಪೊಲೀಸರು ದಾಳಿ ನಡೆಸಿದ್ದಾರೆ.
|