ಈಶಾನ್ಯ ರೈಲ್ವೆ ವ್ಯಾಪ್ತಿಯ ಗೋಡಾರ್‌ವಾರ್ ನಿಲ್ದಾಣದಲ್ಲಿ ನಿಂತಿದ್ದ ಸರಕುಸಾಗಣೆ ರೈಲಿಗೆ ಅಮೃತಸರಕ್ಕೆ ತೆರಳುತ್ತಿದ್ದ ಜನಾಯಕ್ ಎಕ್ಸಪ್ರೆಸ್ ಸೂಪರ್‌ಫಾಸ್ಟ್ ರೈಲು ಮಂಗಳವಾರ ಬೆಳಿಗ್ಗೆ ಡಿಕ್ಕಿಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಎಕ್ಸ್‌ಪ್ರೆಸ್ ರೈಲಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 28 ಪ್ರಯಾಣಿಕರು ಗಾಯಗೊಂಡಿದ್ದಾರೆ.
ರೈಲ್ವೆ ಮೂಲಗಳ ಪ್ರಕಾರ, ಬಿಹಾರದ ದರ್ಬಾಂಗದಿಂದ ಆಗಮಿಸಿದ ಎಕ್ಸ್‌ಪ್ರೆಸ್ ರೈಲು ಸರಕುಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಮತ್ತು ಎಂಜಿನ್‌ಗೆ ಹಾನಿಯಾಗಿದೆ. ಗೋರಖ್‌ಪುರಕ್ಕೆ 30 ಕಿಮೀ ದೂರದಲ್ಲಿ ಉತ್ತರಪ್ರದೇಶದ ಖುಶಿನಗರ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ಗಾಯಗೊಂಡವರಲ್ಲಿ 25 ಜನರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಉಳಿದವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ರೈಲ್ವೆ ಸಂಚಾರ ಈ ವಿಭಾಗದಲ್ಲಿ ಪುನಃ ಆರಂಭಿಸಲಾಗಿದೆ.
|