ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೀರ್ಪಿನ ಜತೆ ಕಾರಣ ದಾಖಲು: ಸುಪ್ರೀಂಕೋರ್ಟ್
PTI
ಸೂಕ್ತ ಕಾರಣಗಳನ್ನು ನೀಡದೇ ಕೋರ್ಟ್‌ಗಳು ಆದೇಶ ನೀಡಲು ಸಾಧ್ಯವಿಲ್ಲ ಮತ್ತು ಈ ಕಾರಣಗಳನ್ನು ತೀರ್ಪಿನ ಜತೆ ದಾಖಲು ಮಾಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸೂಕ್ತ ಕಾರಣಗಳಿಲ್ಲದೇ ಅಥವಾ ಕಾರಣವನ್ನು ಮುಂದಿನ ದಿನಾಂಕಕ್ಕೆ ಮೀಸಲಿರಿಸಿ ತೀರ್ಪುಗಳನ್ನು, ಆದೇಶಗಳನ್ನು ನೀಡುವ ಅಭ್ಯಾಸದ ಬಗ್ಗೆ ನ್ಯಾಯಮೂರ್ತಿಗಳಾದ ಸಿ.ಕೆ. ಥಕ್ಕರ್ ಮತ್ತು ಡಿ.ಕೆ. ಜೈನ್ ಅವರಿದ್ದ ಪೀಠ ಅಸಮ್ಮತಿ ವ್ಯಕ್ತಪಡಿಸಿದೆ.

ಅಂತಿಮ ತೀರ್ಪಿನಲ್ಲಿ ಯಾವುದೇ ಕಾರಣವಿಲ್ಲದಿದ್ದರೆ ಅನೇಕ ಪ್ರಶ್ನೆಗಳು ಉದ್ಭವಿಸಬಹುದು ಮತ್ತು ಮೇಲಿನ ಕೋರ್ಟ್‌ಗಳಿಗೆ ವಿಷಯ ಇತ್ಯರ್ಥ ಮಾಡುವುದು ಕಷ್ಟವಾಗಬಹುದು ಎಂದು ಪೀಠವು ಅಭಿಪ್ರಾಯಪಟ್ಟಿತು. ಹೈಕೋರ್ಟ್ ಸೇರಿದಂತೆ ಎಲ್ಲ ಕೋರ್ಟ್‌ಗಳು ತೀರ್ಪಿಗೆ ಪೂರಕವಾದ ಕಾರಣಗಳನ್ನು ದಾಖಲು ಮಾಡಿದ ಬಳಿಕವೇ ಅಂತಿಮ ತೀರ್ಪನ್ನು ನೀಡುವುದು ಸೂಕ್ತ ಮತ್ತು ಅಪೇಕ್ಷಣೀಯ ಎಂದು ತನ್ನ ಮುಂಚಿನ ತೀರ್ಪುಗಳನ್ನು ನೆನಪಿಸಿಕೊಳ್ಳುತ್ತಾ ಸುಪ್ರೀಂಕೋರ್ಟ್ ತಿಳಿಸಿತು.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಯಾವುದೇ ಕಾರಣ ನೀಡದೇ ತಮ್ಮ ಮೇಲ್ಮನವಿ ವಜಾ ಮಾಡಿದ್ದರ ವಿರುದ್ಧ ಆರೋಪಿ ಮಂಗತ್ ರಾಂ ಸುಪ್ರೀಂಕೋರ್ಟ್‌ಗೆ ಅಪೀಲು ಸಲ್ಲಿಸಿದ್ದರು. ಈ ಅಪೀಲನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಅಪೀಲನ್ನು ಪುನರ್ಪರಿಶೀಲನೆಗೆ ಎತ್ತಿಕೊಂಡಿತು.
ಮತ್ತಷ್ಟು
ಬೋಗಸ್ ಪಿಐಎಲ್‌ಗೆ ಲಕ್ಷ ರೂ. ದಂಡ: ಸು.ಕೋ. ಇಂಗಿತ
ಮೂವರು ಬಿಎಸ್‌ಪಿ ಸಂಸದರ ಮಾನ್ಯತೆ ರದ್ದು
ರೈಲುಗಳ ಡಿಕ್ಕಿ: ಚಾಲಕ ಸಾವು, 28 ಮಂದಿಗೆ ಗಾಯ
ನಕ್ಸಲೀಯರ ತಂಡದಿಂದ ಇಬ್ಬರ ಹತ್ಯೆ
ಕೇರಳದ ಮಾಜಿ ಸಚಿವ ಬೇಬಿ ಜಾನ್ ನಿಧನ
ಫೆ.25: ನಂದಿಗ್ರಾಮ ವಿಚಾರಣೆ