ಪ್ರಸಕ್ತ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರದ ಪ್ರಾಜೆಕ್ಟ್ ಟೈಗರ್ ಯೋಜನೆಯನ್ನು ಮುಂದುವರಿಸಲು ಸರ್ಕಾರ ಬುಧವಾರ ನಿರ್ಧರಿಸಿದ್ದು, ಈ ಉದ್ದೇಶಕ್ಕಾಗಿ 600 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಹುಲಿ ವನ್ಯಧಾಮದಲ್ಲಿ ನೆಲೆಸಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಮತ್ತು ವನ್ಯಜೀವಿ ಸಂರಕ್ಷಣೆ ಹಿತಾಸಕ್ತಿ ಅಡಿಯಲ್ಲಿ ಸುರಕ್ಷತೆ ಅಳವಡಿಕೆ ಮತ್ತು ಮರುಸುಧಾರಣೆ ಕ್ರಮಗಳನ್ನು ಅನುಷ್ಠಾನಗೊಳಿಸಲು ಈ ಹಣವನ್ನು ಬಳಸಲಾಗುವುದು ಎಂದು ವಿತ್ತಸಚಿವ ಪಿ.ಚಿದಂಬರಂ ಸಿಸಿಇಎ ಸಭೆಯ ಬಳಿಕ ಇಲ್ಲಿ ತಿಳಿಸಿದರು.
ತಮಿಳುನಾಡು, ಕರ್ನಾಟಕ, ಚತ್ತೀಸ್‌ಗಢ ಮತ್ತು ಅಸ್ಸಾಂ ಮುಂತಾದ ರಾಜ್ಯಗಳಲ್ಲಿ 8 ಹೊಸ ವ್ಯಾಘ್ರ ಮೀಸಲು ಅರಣ್ಯಗಳ ಸ್ಥಾಪನೆಗೆ ಕೂಡ ಈ ಹಣವನ್ನು ಕರ್ಚು ಮಾಡಲಾಗುವುದು ಎಂದು ಚಿದಂಬರಂ ತಿಳಿಸಿದರು.
|