ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಪ್ರತ್ಯೇಕ ಅಪಘಾತಗಳಲ್ಲಿ 21 ಸಾವು
ಮದುವೆ ದಿಬ್ಬಣದ 10 ಮಂದಿ ಸೇರಿದಂತೆ ಕನಿಷ್ಠ 21 ಜನರು ಮೇಘಾಲಯ ಮತ್ತು ಅಸ್ಸಾಂನಲ್ಲಿ ಬುಧವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಗುವಾಹಟಿ-ಸಿಲ್ಚಾರ್ ಬಸ್ಸು ರಸ್ತೆಯಿಂದ ಜಾರಿ ಶಿಲ್ಲಾಂಗ್‌ಗೆ 409 ಕಿಮೀ ದೂರದ ಮಾರ್ವಿಂಕ್‌ನೆಂಗ್ ಬಳಿ 100 ಮೀಟರ್ ಆಳದ ಕಂದಕಕ್ಕೆ ಬಿದ್ದು 11 ಮಂದಿ ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಸ್ಸಾಂ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸಿನಲ್ಲಿ 40 ಪ್ರಯಾಣಿಕರಿದ್ದರು. ಉಳಿದ 29 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಶಿಲ್ಲಾಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಸ್ಸಾಂನ ಸೋನಿಟ್‌ಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಮಿನಿ ಬಸ್ಸೊಂದು ಗೆಜೆಂಗಗುರಿ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದು ಮದುವೆ ದಿಬ್ಬಣಕ್ಕೆ ಸೇರಿದ 10 ಮಂದಿ ಸತ್ತಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ.

ಚಾಲಕ ಸೇರಿದಂತೆ 7 ಜನರು ಸ್ಥಳದಲ್ಲೇ ಸತ್ತಿದ್ದಾರೆ ಮತ್ತು ಇನ್ನುಳಿದವರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ತೀವ್ರ ಗಾಯಗಳಿಂದ ಸತ್ತಿದ್ದಾರೆ. ವಧುವನ್ನು ಒರಾಂಗ್‌ನಲ್ಲಿ ಇಳಿಸಿ ತೇಜಪುರಕ್ಕೆ ಬಸ್ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮತ್ತಷ್ಟು
ಪ್ರಾಜೆಕ್ಟ್ ಟೈಗರ್ ಯೋಜನೆ ಮುಂದುವರಿಕೆ
ಅರಬ್ಬಿ ಸಮುದ್ರದಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜನೆ
ಅಬ್ದುಲ್ ಕರೀಂ ತೆಲಗಿಗೆ 10 ವರ್ಷಗಳ ಕಠಿಣ ಶಿಕ್ಷೆ
ತೀರ್ಪಿನ ಜತೆ ಕಾರಣ ದಾಖಲು: ಸುಪ್ರೀಂಕೋರ್ಟ್
ಬೋಗಸ್ ಪಿಐಎಲ್‌ಗೆ ಲಕ್ಷ ರೂ. ದಂಡ: ಸು.ಕೋ. ಇಂಗಿತ
ಮೂವರು ಬಿಎಸ್‌ಪಿ ಸಂಸದರ ಮಾನ್ಯತೆ ರದ್ದು