ಉತ್ತರಪ್ರದೇಶ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಮುಸ್ಲಿಮರನ್ನು ಕೆಟ್ಟದಾಗಿ ಚಿತ್ರಿಸಿರುವ ಸಿಡಿಯನ್ನು ಬಿಜೆಪಿ ಹಂಚಿಕೆ ಮಾಡಿರುವುದು ಈಗ ಪಕ್ಷಕ್ಕೆ ದುಃಸ್ವಪ್ನವಾಗಿ ಪರಿಣಮಿಸಿದೆ. ಸಿಡಿಯ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುತ್ತಿರುವ ಆರೋಪದ ಮೇಲೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತಿತರ ಮುಖಂಡರ ಮೇಲೆ ಮಾಯಾವತಿ ಸರ್ಕಾರ ದೂರು ನೀಡಿದೆ.
ಬಿಜೆಪಿ ಮುಖಂಡರ ವಿರುದ್ಧ ದೂರನ್ನು ದಾಖಲಿಸಲಾಗಿದ್ದು, ಅವರ ವಿರುದ್ಧ ಕ್ರಮವು ತನಿಖೆಯನ್ನು ಆಧರಿಸಿದೆ ಎಂದು ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಉತ್ತರಪ್ರದೇಶದ ಹಿರಿಯ ನಾಯಕ ಲಾಲ್ಜಿ ಟಂಡನ್ ಲಕ್ನೊದಲ್ಲಿ ಚುನಾವಣೆಗೆ ಮುಂಚೆ ನಡೆದ ಸಮಾರಂಭದಲ್ಲಿ ಸಿಡಿಯನ್ನು ಬಿಡುಗಡೆ ಮಾಡಿದ್ದರು.
ಆದರೆ ಮುಸ್ಲಿಮರನ್ನು ಕೆಟ್ಟದಾಗಿ ಚಿತ್ರಿಸಿರುವ ಈ ಸಿಡಿ ಅಧಿಕೃತ ಪ್ರಚಾರದ ಭಾಗವಲ್ಲ ಎಂದು ಬಿಜೆಪಿ ಪ್ರತಿಪಾದಿಸಿದ್ದು, ಕಿರಿಯ ಕಾರ್ಯಕರ್ತರೊಬ್ಬರು ಸಿದ್ಧಪಡಿಸಿದ್ದಾರೆ ಎಂದು ಹೇಳುತ್ತಿದೆ.
|