ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ರಮ ಮೂತ್ರಪಿಂಡ ಜಾಲಕ್ಕೆ ಅಮಾಯಕರು ಬಲಿ
ದಿನಕ್ಕೆ 150 ರೂ. ಸಂಬಳದ ಜತೆಗೆ ಮೌಖಿಕ ಒಪ್ಪಂದವೇನೆಂದರೆ ಗುರಗಾಂವ್ ಆಸ್ಪತ್ರೆಯಲ್ಲಿ ದೈಹಿಕ ಅರ್ಹತೆ ಪರೀಕ್ಷೆ ಮಾಡಿಸಿಕೊಳ್ಳಬೇಕೆನ್ನುವುದು. ಕಟ್ಟಡ ನಿರ್ಮಾಣದ ಕಾರ್ಮಿಕ ಸಕೀಲನಂತವರಿಗೆ ಮೊದಲಿಗೆ ಅನಿಸಿದ ಭಾವನೆ ಒಳ್ಳೆಯ ಮಾಲೀಕ ಸಿಕ್ಕಿದ್ದಾನೆನ್ನುವುದು. ಆದರೆ ತಾನು ಮೂತ್ರಪಿಂಡವನ್ನೇ ಬಲಿದಾನ ನೀಡಿದ್ದೇನೆಂಬುದು ಅವನಿಗೆ ಬಳಿಕ ಅರಿವಾಯಿತು. ಕಳೆದ 10 ವರ್ಷಗಳಲ್ಲಿ "ಡಾ.ಹಾರರ್" ಎಂದೇ ನಾಮಾಂಕಿತರಾದ ಅಮಿತ್ ಅಲಿಯಾಸ್ ಸಂತೋಷ್ ರಾವತ್ ಅವನನ್ನು ಒಳಗೊಂಡ ಬಹುಕೋಟಿ ಮೂತ್ರಪಿಂಡ ಹಗರಣವು ಸುಮಾರು 500 ಅಕ್ರಮ ಮೂತ್ರಪಿಂಡ ಕಸಿ ಚಿಕಿತ್ಸೆಗೆ ದಾರಿ ಕಲ್ಪಿಸಿತು.

ಸಕೀಲ್, ಸಲೀಂ, ನಾಸಿಮ್ ಎಲ್ಲರೂ ಬಡವರು, ಅರೆಕುಶಲಿ ಕಾರ್ಮಿಕರು. ಗುರಗಾಂವ್ ಆಸ್ಪತ್ರೆಯಲ್ಲಿ ಮಲಗಿಕೊಂಡು ನಿಜಜೀವನದ ಭೀಭತ್ಸ ಕಥೆಯನ್ನು ಬಿಚ್ಚಿಡುತ್ತಾರೆ.
ಸಕೀಲ್‌ನನ್ನು ಮನೆ ಕಂ ಆಸ್ಪತ್ರೆಗೆ ಜ.23ರ ರಾತ್ರಿ ಕರೆದೊಯ್ದಾಗ ಹಾಸಿಗೆಯಲ್ಲಿ ಮಲಗಿದ್ದ ಇನ್ನೂ ಮೂರು ಮಂದಿಯನ್ನು ನೋಡಿದ. ಅವರು ಯಾವುದೇ ಮಾತನ್ನು ಆಡಲು ನಿರಾಕರಿಸಿದರು. ರೋಗಿಗಳನ್ನು ನೋಡಿಕೊಳ್ಳುವ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಅವನಿಗೆ ಕೂಡ ಅದೇ ಮಾತನ್ನು ಹೇಳಿದ್ದರು.

ಮರುದಿನ ಬೆಳಿಗ್ಗೆ ಸಕೀಲ್ ಹೊಟ್ಟೆನೋವಿನೊಂದಿಗೆ ಎದ್ದಾಗ ಅವನ ಮೂತ್ರಪಿಂಡ ತೆಗೆದಿರುವ ವಿಷಯವನ್ನು "ವೈದ್ಯ" ಮಹಾಶಯರು ಬಹಿರಂಗಪಡಿಸಿದರು.ಎರಡು ದಿನಗಳ ಬಳಿಕ ಹಾಸಿಗೆಯ ಮೇಲೆ ಮೌನಿಯಾಗಿ ಸಕೀಲ್ ಮಲಗಿದ್ದಾಗ ಉತ್ತರಪ್ರದೇಶ ಪೊಲೀಸರ ಆಗಮನವಾಯಿತು. ಅಕ್ರಮ ಮೂತ್ರಪಿಂಡ ಜಾಲದ ಶಂಕಿತರಿಗಾಗಿ ಅವರು ಹುಡುಕುತ್ತಿದ್ದರು.

ಸಕೀಲ್ ಜತೆ ಸಲೀಂ ಮತ್ತು ನಸೀಂ ಕೂಡ ಡಾ.ಹಾರರ್‌ಗೆ ಮೂತ್ರಪಿಂಡ ಕಳೆದುಕೊಂಡಿದ್ದು ಬೆಳಕಿಗೆ ಬಂತು.ಚೆಕ್‌ಅಪ್‌ಗಾಗಿ ಕಾಯುತ್ತಿದ್ದ ಅಜಯ್ ಕುಮಾರ್ ಮತ್ತು ಸಂಜಯ ಕುಮಾರ್ ಎಂಬ ಯುವಕರನ್ನು ಮೂತ್ರಪಿಂಡ ಚೋರರಿಂದ ಪೊಲೀಸರು ಉಳಿಸಿದರು.
ಮತ್ತಷ್ಟು
ಕೋಮುವಾದಿ ಸಿಡಿ ಹಂಚಿಕೆ: ಬಿಜೆಪಿಗೆ ದುಃಸ್ವಪ್ನ
ಎರಡು ಪ್ರತ್ಯೇಕ ಅಪಘಾತಗಳಲ್ಲಿ 21 ಸಾವು
ಪ್ರಾಜೆಕ್ಟ್ ಟೈಗರ್ ಯೋಜನೆ ಮುಂದುವರಿಕೆ
ಅರಬ್ಬಿ ಸಮುದ್ರದಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜನೆ
ಅಬ್ದುಲ್ ಕರೀಂ ತೆಲಗಿಗೆ 10 ವರ್ಷಗಳ ಕಠಿಣ ಶಿಕ್ಷೆ
ತೀರ್ಪಿನ ಜತೆ ಕಾರಣ ದಾಖಲು: ಸುಪ್ರೀಂಕೋರ್ಟ್