ಸಂಸತ್ತು ಕನಿಷ್ಠ 100 ದಿನಗಳ ಅಧಿವೇಶನ ಸೇರಬೇಕು ಮತ್ತು ರಾಜ್ಯ ವಿಧಾನಸಭೆಗಳು ಕನಿಷ್ಠ 60 ದಿನಗಳ ಅಧಿವೇಶನ ನಡೆಸಬೇಕು ಎಂದು ಏಳು ರಾಜ್ಯಗಳಿಗೆ ಸೇರಿದ ವಿಧಾನಸಭೆ ಅಧ್ಯಕ್ಷರು ಬುಧವಾರ ಸಲಹೆ ಮಾಡಿದ್ದಾರೆ. ಶಾಸಕಾಂಗ ಸಭೆಗಳ ಅಧ್ಯಕ್ಷರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಆದೇಶ ನೀಡಲು ಏಳು ವಿಧಾನಸಭೆಗಳ ಅಧ್ಯಕ್ಷರ ಸಹಿತ ಲೋಕಸಭೆಯ ಉಪಾಧ್ಯಕ್ಷರು ಅಧ್ಯಕ್ಷರಾಗಿರುವ ಉಪ ಸಮಿತಿಯನ್ನು ರಚಿಸಲಾಗಿದೆ.
ಉಪಸಮಿತಿಯ ಎರಡು ದಿನಗಳ ಸಭೆಯಲ್ಲಿ ಸಂಸತ್ತಿನಲ್ಲಿ 100 ದಿನಗಳ ಅಧಿವೇಶನ ಮತ್ತು ವಿಧಾನಸಭೆಯಲ್ಲಿ ಕನಿಷ್ಠ 60 ದಿನಗಳ ಅಧಿವೇಶನಕ್ಕೆ ಶಿಫಾರಸು ಮಾಡಲಾಯಿತು ಎಂದು ಸಮಿತಿಯ ಅಧ್ಯಕ್ಷ ಮತ್ತು ಲೋಕಸಭೆ ಉಪಸ್ಪೀಕರ್ ಚರಣ್‌ಜಿತ್ ಸಿಂಗ್ ಅಟ್ವಾಲ್ ವರದಿಗಾರರಿಗೆ ಇಲ್ಲಿ ತಿಳಿಸಿದರು. ಈ ಬಗ್ಗೆ ಕಾನೂನಿನ ಅಭಿಪ್ರಾಯಕ್ಕೆ ಕೂಡ ಸಮಿತಿ ಶಿಫಾರಸು ಮಾಡಿದೆ.
ಕನಿಷ್ಠ ಕಾಲಮಿತಿಯನ್ನು ನಿಗದಿ ಮಾಡುವ ಮೂಲಕ ಸದನದಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ಸಿಗುತ್ತಿಲ್ಲವೆಂಬ ಸದಸ್ಯರ ಕುಂದುಕೊರತೆಯನ್ನು ಕೂಡ ಪರಿಶೀಲಿಸಿ, ಸಾವರ್ಜನಿಕ ಅಭಿವೃದ್ಧಿ ಕುರಿತ ವಿಷಯಗಳಿಗೆ ಹೆಚ್ಚು ಕಾಲಾವಕಾಶ ನೀಡಲು ಶಿಫಾರಸು ಮಾಡಲಾಯಿತು. ಮುಖ್ಯ ಮಂತ್ರಿಗಳ ಕಾರ್ಯಾಲಯದ ರೀತಿಯಲ್ಲಿ ಸ್ಪೀಕರ್‌ಗಳಿಗೆ ಕಾರ್ಯಾಲಯವಿರಬೇಕೆಂದು ಕೂಡ ಉಪಸಮಿತಿ ಶಿಫಾರಸು ಮಾಡಿತು.
|