ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಸಿಇಆರ್‌ಟಿ: ಸ್ವಾತಂತ್ರ್ಯ ಯೋಧರಿಗೆ ಉಗ್ರರ ಪಟ್ಟ
ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರಗಾಮಿಗಳು ಎಂದು ಬಿಂಬಿಸಿದ ತನ್ನ ತಪ್ಪನ್ನು ಎನ್‌ಸಿಇಆರ್‌ಟಿ ಅರಿತುಕೊಂಡು ಇತಿಹಾಸದ ಪಠ್ಯಪುಸ್ತಕಗಳಿಂದ ಆಕ್ಷೇಪಾರ್ಹ ಭಾಗಗಳನ್ನು ತೆಗೆದಿದೆ. ಈ ಪುಸ್ತಕಗಳು ರಾಷ್ಟ್ರೀಯ ನಾಯಕರು ಮತ್ತು ಕೆಲವು ಸಮುದಾಯಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಒಳಗೊಂಡಿದ್ದ ರಿಂದ ಈ ಭಾಗಗಳನ್ನು ತೆಗೆಯಲಾಯಿತು ಎಂದು ದೆಹಲಿ ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಲಾಯಿತು.

ಶಾಲಾಪಠ್ಯಪುಸ್ತಕಗಳ ವಿಷಯಗಳನ್ನು ಅಂತಿಮಗೊಳಿಸುವ ಉನ್ನತಸಂಸ್ಥೆಯು ಇತಿಹಾಸ ಪುಸ್ತಕದ ನವೀಕೃತ ಭಾಗವು ಈ ವರ್ಷದಿಂದ ಎಲ್ಲಾ ಶಾಲೆಗಳಲ್ಲಿ ಲಭ್ಯವಿರುವುದೆಂದು ತಿಳಿಸಿದೆ.

ಸಿಖ್ ಧಾರ್ಮಿಕ ನಾಯಕ ಗುರು ಗೋವಿಂದ ಸಿಂಗ್, ಆರ್ಯಭಟ ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ ಕುರಿತು ಕೆಲವು ಪ್ರಸ್ತಾಪಗಳು ಹಾಗೂ ಬಾಲಗಂಗಾಧರ ನಾಥ ತಿಲಕ್, ಬಂಕಿಮ್ ಚಂದ್ರ ಮತ್ತು ಲಾಲಾ ಲಜಪತ್ ರಾಯ್ ಅವರನ್ನು ಉಗ್ರಗಾಮಿಗಳು ಎಂಬ ಪಟ್ಟನೀಡಿರುವುದು ಆಕ್ಷೇಪಾರ್ಹ ಭಾಗಗಳಲ್ಲಿ ಸೇರಿದೆ.

ಪಠ್ಯಪುಸ್ತಕದಿಂದ ವಿವಾದಾದ್ಮಕ ಭಾಗ ತೆಗೆದ ಬಳಿಕ ಹೊಸ ಪಠ್ಯಕ್ರಮವನ್ನು ಈ ವರ್ಷದ ಏಪ್ರಿಲ್‌ನಿಂದ ಜಾರಿಗೆ ತರಲಾಗುವುದು ಎಂದು ಎನ್‌ಸಿಇಆರ್‌ಟಿ ಪರವಾಗಿ ವಕೀಲ ರೋಹಿತ್ ಕೆ. ಸಿಂಗ್ ವಿಭಾಗೀಯ ಪೀಠಕ್ಕೆ ತಿಳಿಸಿದರು.ವಕೀಲರ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥ ಮಾಡಿ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕೆಂದು ತಿಳಿಸಿದರು.
ಮತ್ತಷ್ಟು
ಸಂಸತ್ತಿನಲ್ಲಿ ಕನಿಷ್ಠ 100 ದಿನ ಅಧಿವೇಶನ
ಅಕ್ರಮ ಮೂತ್ರಪಿಂಡ ಜಾಲಕ್ಕೆ ಅಮಾಯಕರು ಬಲಿ
ಕೋಮುವಾದಿ ಸಿಡಿ ಹಂಚಿಕೆ: ಬಿಜೆಪಿಗೆ ದುಃಸ್ವಪ್ನ
ಎರಡು ಪ್ರತ್ಯೇಕ ಅಪಘಾತಗಳಲ್ಲಿ 21 ಸಾವು
ಪ್ರಾಜೆಕ್ಟ್ ಟೈಗರ್ ಯೋಜನೆ ಮುಂದುವರಿಕೆ
ಅರಬ್ಬಿ ಸಮುದ್ರದಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜನೆ