ದಾಖಲೆ ಪುಸ್ತಕಕ್ಕೆ ಸೇರುವ ಪ್ರಯತ್ನವಾಗಿ ನಗರ ಮೂಲದ ವಿನ್ಯಾಸಕಾರ ಕಂಪ್ಯೂಟರ್‌ನಲ್ಲಿ 36 ಸೀರೆಗಳನ್ನು ಸತತ 6 ಗಂಟೆಗಳ ಕಾಲ ವಿನ್ಯಾಸಗೊಳಿಸಿದ್ದಾರೆಂದು ತಿಳಿದುಬಂದಿದೆ. ಲಿಮ್ಕಾ ದಾಖಲೆ ಪುಸ್ತಕದ ಸಹಾಯಕ ಸಂಪಾದಕ ವಿ.ವಿ.ಆರ್.ಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದು, ಸೂಕ್ತ ದಾಖಲಾತಿ ಬಳಿಕ ಎಲ್ಲ ವಿವರಗಳನ್ನು ಲಿಮ್ಕಾಗೆ ಕಳಿಸಲಾಗುವುದು ಎಂದು ಹೇಳಿದರು.
ಕೆ.ಜೆ. ಮಹೇಶ್ ಕುಮಾರ್ ಜ.28ರಂದು 6.01ಗಂಟೆಗೆ ಕಾರ್ಯಾರಂಭ ಮಾಡಿ ಬುಧವಾರ ರಾತ್ರಿ 7ಗಂಟೆಗೆ ತನ್ನ ಕೆಲಸವನ್ನು ಮುಗಿಸಿದರು. ಲಿಮ್ಕಾ ನಿಗದಿಮಾಡಿದ್ದಕ್ಕಿಂತ 7 ಗಂಟೆಗಳಷ್ಟು ಹೆಚ್ಚು ಕಾಲ ಅವರು ತೆಗೆದುಕೊಂಡರು.
ಈ ವಿನ್ಯಾಸಗಳನ್ನು ಹರಾಜು ಹಾಕಲಾಗುವುದು ಅಥವಾ ಸೀರೆ ಮುದ್ರಕರಿಗೆ ಅಥವಾ ವಿನ್ಯಾಸಕಾರರಿಗೆ ಮಾರಾಟ ಮಾಡಲಾಗುವುದು. ಇದರಿಂದ ಬಂದ ಹಣವನ್ನು ಧರ್ಮದತ್ತಿ ಉದ್ದೇಶಕ್ಕೆ ಬಳಸಲಾಗುವುದು ಎಂದು ಅವರು ನುಡಿದರು.
|