ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಪ್ಪು ಔಷಧಿಯಿಂದ ದುಷ್ಪರಿಣಾಮ: ತಸ್ಲೀಮಾ
PTI
ಶಂಕಿತ ಔಷಧಿಯ ದುಷ್ಪರಿಣಾಮದ ಬಗ್ಗೆ ಜ.26ರಂದು ನವದೆಹಲಿಯ ಏಮ್ಸ್‌ಗೆ ದಾಖಲಾದ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಸರ್ಕಾರಿ ನಿಯೋಜಿತ ವೈದ್ಯರು ತಮಗೆ ತಪ್ಪು ಔಷಧಿಗಳನ್ನು ನೀಡಿದ್ದಾರೆಂದು ಆರೋಪಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅಜ್ಞಾತ ಸ್ಥಳದಿಂದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಒತ್ತಡದ ಸ್ಥಿತಿಯಲ್ಲಿದ್ದಿದ್ದರಿಂದ ರಕ್ತದೊತ್ತಡ ಏರಿತೆಂದು ಹೇಳಿದ್ದಾರೆ.

ತಾನು ಅಸ್ವಸ್ಥತೆಗೊಳಗಾದಾಗ ಹೃದಯರೋಗ ತಜ್ಞರ ಬಳಿ ತಮ್ಮನ್ನು ಕರೆದುಕೊಂಡು ಹೋಗದೇ ಸರ್ಕಾರಿ ನಿಯೋಜಿತ ವೈದ್ಯರು ತಪ್ಪು ಔಷಧಿಗಳನ್ನು ನೀಡಿದರೆಂದು ನಸ್ರೀನ್ ಹೇಳಿದರು. ಶನಿವಾರ ಸಂಜೆ ವಿಷಕಾರಿ ವಸ್ತುವಿನ ಪರಿಣಾಮದಿಂದ ತಕ್ಷಣವೇ ಸ್ಮೃತಿ ತಪ್ಪಿದ್ದಾಗಿ ಅವರು ಹೇಳಿದರು.

ಏಮ್ಸ್‌ನ ಮುಖ್ಯ ವಕ್ತಾರ ಹೇಳುವ ಪ್ರಕಾರ, ತಸ್ಲೀಮಾ ನಸ್ರೀನ್ ಅವರನ್ನು ಜನ.26ರ ರಾತ್ರಿ ಆಸ್ಪತ್ರೆಗೆ ಕರೆತರಲಾಯಿತು, ಕೆಲವು ಶಂಕಿತ ಔಷಧಿ ದುಷ್ಪರಿಣಾಮದಿಂದ ಅವರು ನರಳುತ್ತಿರುವುದು ಆರಂಭಿಕ ಪರೀಕ್ಷೆಯಲ್ಲಿ ತಿಳಿದುಬಂತು. ಇದು ಕೆಲವು ಔಷಧಿಯ ದುಷ್ಪರಿಣಾಮ ಎಂದು ಅವರು ನುಡಿದರು.
ಮತ್ತಷ್ಟು
ಲಿಮ್ಕಾ ದಾಖಲೆಗೆ ಸೇರಲು ಸೀರೆಗಳ ವಿನ್ಯಾಸ
ಇಂದು ಅರುಣಾಚಲಕ್ಕೆ ಪ್ರಧಾನಿ ಭೇಟಿ
ಸಂಸತ್ತಿನಲ್ಲಿ ಕನಿಷ್ಠ 100 ದಿನ ಅಧಿವೇಶನ
ಅಕ್ರಮ ಮೂತ್ರಪಿಂಡ ಜಾಲಕ್ಕೆ ಅಮಾಯಕರು ಬಲಿ
ಕೋಮುವಾದಿ ಸಿಡಿ ಹಂಚಿಕೆ: ಬಿಜೆಪಿಗೆ ದುಃಸ್ವಪ್ನ
ಎರಡು ಪ್ರತ್ಯೇಕ ಅಪಘಾತಗಳಲ್ಲಿ 21 ಸಾವು