ವಿವಾದಾತ್ಮಕ ಸೇತುಸಮುದ್ರಂ ಯೋಜನೆ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಕೇಂದ್ರಸರ್ಕಾರಕ್ಕೆ ಇನ್ನೂ ನಾಲ್ಕು ವಾರಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ಗುರುವಾರ ನೀಡಿದೆ. ವಿವಾದಕ್ಕೆ ಹೊಸ ತಿರುವು ನೀಡಿರುವ ಕೋಸ್ಟ್ ಗಾರ್ಡ್ ಪ್ರಧಾನನಿರ್ದೇಶಕ ವೈಸ್ ಅಡ್ಮಿರಲ್ ಆರ್.ಎಫ್. ಕಂಟ್ರಾಕ್ಟರ್, ಸೇತುಸಮುದ್ರಂ ಯೋಜನೆಯು ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗುವ ಸಂಭವವಿದೆ ಎಂದು ಹೇಳಿದೆ.
ಈ ಕಾಲುವೆಯನ್ನು ಉಗ್ರಗಾಮಿಗಳು ಬಳಸಿಕೊಳ್ಳುವ ತೀವ್ರ ಸಾಧ್ಯತೆಯಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಮುನ್ನ ಈ ಯೋಜನೆಯು ಕಾರ್ಯಸಾಧ್ಯವಲ್ಲದ ಮತ್ತು ನಷ್ಟದ ವ್ಯವಹಾರ ಎಂದು ಅವರು ಈ ಮುಂಚೆ ತಿಳಿಸಿದ್ದರು.
ಪ್ರಾಚೀನ ಕಾಲದಲ್ಲಿ ಭಗವಾನ್ ರಾಮ ನಿರ್ಮಿಸಿದ ಸೇತುವೆಯೆಂದು ನಂಬಲಾದ ಮರಳಿನ ರಚನೆಯ ಸಮೂಹವಾದ ರಾಮಸೇತುಗೆ ಈ ಯೋಜನೆಯಿಂದ ಹಾನಿಯಾಗುವುದೆಂದು ಅವರು ಹೇಳಿದ್ದರು.ಯೋಜನೆಯನ್ನು ಮುಂದುವರಿಸುವ ಬಗ್ಗೆ ಸಂಸ್ಕೃತಿ ಮತ್ತು ನೌಕಾಯಾನ ಖಾತೆಗಳ ನಡುವೆ ನೇರ ಸಂಘರ್ಷ ಉಂಟಾಗಿದ್ದರಿಂದ ಅವು ಜಂಟಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಇದಕ್ಕೆ ಮುನ್ನ ನಿರ್ಧರಿಸಿತ್ತು.
|