ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ಹೆಸರು ತೆಗೆಯಲು ಹೈಕೋರ್ಟ್ ಆದೇಶ
PTI
ಹರೇನ್ ಪಾಂಡ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡ್ಯ ಅವರ ತಂದೆ ಪ್ರಕರಣದ ಮರುತನಿಖೆ ನಡೆಸಬೇಕೆಂದು ಸಲ್ಲಿಸಿದ ಮೇಲ್ಮನವಿಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರತಿವಾದಿಯಾಗಿ ಹೆಸರಿಸಿರುವುದನ್ನು ತೆಗೆಯುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ಕ್ರಿಮಿನಲ್ ನಿಯಮ ಸಂಹಿತೆ ಪ್ರಕಾರ ಕೆಳ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಗಾದವರನ್ನು ಮಾತ್ರ ಅಪೀಲಿನಲ್ಲಿ ಹೆಸರಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.

ಪಾಂಡ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸಬೇಕೆಂದು ಅವರ ತಂದೆ ವಿಟಲ್ ಪಾಂಡ್ಯ ಆಗ್ರಹಿಸಿದ್ದು, ಸಿಬಿಐ ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ 200 ಪುಟಗಳ ಅಪೀಲನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರು.

ಅಪೀಲಿನಲ್ಲಿ ತಮ್ಮ ಪುತ್ರನ ಕೊಲೆ ರಾಜಕೀಯಪ್ರೇರಿತವಾಗಿದ್ದು, ಮೋದಿ ಪ್ರಚೋದನೆ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವುದರಿಂದ ಮುಖ್ಯಮಂತ್ರಿಯನ್ನು ಪ್ರತಿವಾದಿಯಾಗಿ ಹೆಸರಿಸಲು ಕಾರಣ ಎಂದು ವಾದ ಮಂಡಿಸಿದ್ದರು.

ಇಂತಹ ಅರ್ಜಿಗಳಿಗೆ ಅವಕಾಶ ನೀಡಿದಾಗ, ಪ್ರಕರಣವನ್ನು ಮರುತನಿಖೆ ನಡೆಸಬೇಕಾಗುತ್ತದೆ. ತನಿಖಾ ದಳ ಯಾವುದೇ ವ್ಯಕ್ತಿಯ ವಿರುದ್ಧ ಸಾಕ್ಷ್ಯಾಧಾರ ಪತ್ತೆ ಮಾಡಿದರೆ, ಆರೋಪಪಟ್ಟಿ ಸಲ್ಲಿಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿತು. ಅದಾದ ಬಳಿಕ ಅವರನ್ನು ಆರೋಪಿ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕೇ ಹೊರತು ಅಲ್ಲಿಯವರೆಗೆ ಅವರನ್ನು ವಿಚಾರಣೆಗೆ ಗುರಿಪಡಿಸಲು ಯಾವುದೇ ಆಧಾರವಿಲ್ಲ ಎಂದು ತಿಳಿಸಿತು.

ಅರ್ಜಿದಾರನ ಅರ್ಜಿಯನ್ನು ಮರುಪರಿಶೀಲನೆಗೆ ಪರಿಗಣಿಸುವ ಸಂದರ್ಭದಲ್ಲಿ ಮೂರನೇ ಪ್ರತಿವಾದಿಯಾಗಿ ಮೋದಿ ಹೆಸರು ಯಾವ ಉದ್ದೇಶದಿಂದ ಸೇರಿಸಲಾಗಿದೆಯೆಂದು ತಿಳಿಯಲು ತಾವು ಅಸಮರ್ಥರಾಗಿರುವುದಾಗಿ ಪೀಠ ಅಭಿಪ್ರಾಯಪಟ್ಟಿತು.
ಮತ್ತಷ್ಟು
ಸೇತುಸಮುದ್ರಂ ಪ್ರಮಾಣಪತ್ರ: 4 ವಾರ ಕಾಲಾವಕಾಶ
ತಪ್ಪು ಔಷಧಿಯಿಂದ ದುಷ್ಪರಿಣಾಮ: ತಸ್ಲೀಮಾ
ಲಿಮ್ಕಾ ದಾಖಲೆಗೆ ಸೇರಲು ಸೀರೆಗಳ ವಿನ್ಯಾಸ
ಎನ್‌ಸಿಇಆರ್‌ಟಿ: ಸ್ವಾತಂತ್ರ್ಯ ಯೋಧರಿಗೆ ಉಗ್ರರ ಪಟ್ಟ
ಸಂಸತ್ತಿನಲ್ಲಿ ಕನಿಷ್ಠ 100 ದಿನ ಅಧಿವೇಶನ
ಅಕ್ರಮ ಮೂತ್ರಪಿಂಡ ಜಾಲಕ್ಕೆ ಅಮಾಯಕರು ಬಲಿ