ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಪ್ರ. ಸಂಸದ ಅತೀಕ್ ಅಹ್ಮದ್ ಬಂಧನ
ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಂಸತ್ ಸದಸ್ಯ ಅತೀಕ್ ಅಹ್ಮದ್ ಅವರನ್ನು ಶುಕ್ರವಾರ ನಸುಕಿನಲ್ಲಿ ಬಂಧಿಸಲಾಗಿದೆ. ಉಚ್ಚಾಟಿತ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ 6 ತಿಂಗಳಿಗಿಂತ ಹೆಚ್ಚು ಕಾಲ ತಲೆತಪ್ಪಿಸಿಕೊಂಡು ತಿರುಗುತ್ತಿದ್ದರು.

ಬಹುಜನಸಮಾಜ ಪಕ್ಷದ ಶಾಸಕ ರಾಜು ಪಾಲ್ ಹತ್ಯೆಯಲ್ಲಿ ಅತೀಕ್ ಬಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ರಾಜು ಪಾಲ್ ಅವರನ್ನು 2006ರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆದರೆ ರಾಜುಪಾಲ್ ಹತ್ಯೆಯಲ್ಲಿ ತಾವು ಭಾಗಿಯಾಗಿರುವುದನ್ನು ಅಹ್ಮದ್ ನಿರಾಕರಿಸಿದ್ದರು.

ಪೊಲೀಸರ ಪ್ರಕಾರ ಅತೀಕ್ ಅಹ್ಮದ್ ಮತ್ತು ಅವರ ಸೋದರನ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ತಿಂಗಳಾರಂಭದಲ್ಲಿ ಅಹ್ಮದ್ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಮತ್ತಷ್ಟು
ಮೋದಿ ಹೆಸರು ತೆಗೆಯಲು ಹೈಕೋರ್ಟ್ ಆದೇಶ
ಸೇತುಸಮುದ್ರಂ ಪ್ರಮಾಣಪತ್ರ: 4 ವಾರ ಕಾಲಾವಕಾಶ
ತಪ್ಪು ಔಷಧಿಯಿಂದ ದುಷ್ಪರಿಣಾಮ: ತಸ್ಲೀಮಾ
ಲಿಮ್ಕಾ ದಾಖಲೆಗೆ ಸೇರಲು ಸೀರೆಗಳ ವಿನ್ಯಾಸ
ಎನ್‌ಸಿಇಆರ್‌ಟಿ: ಸ್ವಾತಂತ್ರ್ಯ ಯೋಧರಿಗೆ ಉಗ್ರರ ಪಟ್ಟ
ಸಂಸತ್ತಿನಲ್ಲಿ ಕನಿಷ್ಠ 100 ದಿನ ಅಧಿವೇಶನ