ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೆನೆಗುದಿಗೆ ಬಿದ್ದ ಸೇತುಸಮುದ್ರಂ ಯೋಜನೆ
ಸೇತುಸಮುದ್ರಂ ಯೋಜನೆ ಬಗ್ಗೆ ಸಮೀಕ್ಷೆ ಕೈಗೊಳ್ಳದೇ ದೃಢ ಅಭಿಪ್ರಾಯ ವ್ಯಕ್ತಪಡಿಸಲು ಪುರಾತತ್ವ ಇಲಾಖೆಗೆ ಸಾಧ್ಯವಾಗುವುದಿಲ್ಲ ಎಂದು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ತಿಳಿಸುವ ಮೂಲಕ ವಿವಾದಾತ್ಮಕ ಸೇತುಸಮುದ್ರ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಯೋಜನೆಯ ಬಗ್ಗೆ ವ್ಯಕ್ತವಾದ ಭದ್ರತಾ ಆತಂಕಗಳು ಸೇರಿದಂತೆ ವಿವಿಧ ವಿಷಯಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುವುದೆಂದು ಅವರು ಗುರುವಾರ ತಿಳಿಸಿದ್ದರು.

ಸೇತುಸಮುದ್ರಂ ಪ್ರದೇಶ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವೋ ಅಲ್ಲವೋ ಎಂದು ಘೋಷಿಸಲು ಪುರಾತತ್ವ ಇಲಾಖೆ ಸಮೀಕ್ಷೆ ಕೈಗೊಳ್ಳದೇ ದೃಢ ಅಭಿಪ್ರಾಯವನ್ನು ನೀಡಲು ಸಾಧ್ಯವಿಲ್ಲ ಎಂದು ಸೋನಿ ಹೇಳಿದರು. ಈ ಯೋಜನೆ ಬಗ್ಗೆ ನೌಕಾ ದಳದ ಮುಖ್ಯಸ್ಥ ಮತ್ತು ಕರಾವಳಿ ಕಾವಲು ಪಡೆಯ ಪ್ರಧಾನ ನಿರ್ದೇಶಕ ವ್ಯಕ್ತಪಡಿಸಿದ ಭದ್ರತಾ ಆತಂಕಗಳ ಸಹಿತ ಹೊಸ ವಿವಾದಗಳಿಗೆ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪುರಾತತ್ವ ಇಲಾಖೆ ಯಾವುದೇ ಸಮೀಕ್ಷೆ ಅಥವಾ ಶೋಧನೆ ಕೈಗೊಂಡಿಲ್ಲ. ಆದ್ದರಿಂದ ಪ್ರಥಮ ಮಾಹಿತಿ ಜ್ಞಾನದ ಮೇಲೆ ಯಾವುದೇ ಅಭಿಪ್ರಾಯ ನೀಡುವುದು ಕಷ್ಟ ಎಂದು ಸೋನಿ ಹೇಳಿದ್ದಾರೆ. ಇಂತಹ ಸಮೀಕ್ಷೆ ಕೂಡ ಸುಲಭವಾದ ಮತ್ತು ತಕ್ಷಣದ ಕೆಲಸವಲ್ಲ ಎಂದು ಹೇಳಿದ ಸಚಿವೆ ನಾಗಾರ್ಜುನಕುಂಡದ ಸಮೀಕ್ಷೆ 5ರಿಂದ 6 ವರ್ಷಗಳ ಕಾಲ ತೆಗೆದುಕೊಂಡಿದ್ದನ್ನು ನೆನಪಿಸಿದರು.
ಮತ್ತಷ್ಟು
ತಮಿಳುನಾಡು: ದೂರವಾಣಿ ಕದ್ದಾಲಿಕೆ ಆರೋಪ
ಉ.ಪ್ರ. ಸಂಸದ ಅತೀಕ್ ಅಹ್ಮದ್ ಬಂಧನ
ಮೋದಿ ಹೆಸರು ತೆಗೆಯಲು ಹೈಕೋರ್ಟ್ ಆದೇಶ
ಸೇತುಸಮುದ್ರಂ ಪ್ರಮಾಣಪತ್ರ: 4 ವಾರ ಕಾಲಾವಕಾಶ
ತಪ್ಪು ಔಷಧಿಯಿಂದ ದುಷ್ಪರಿಣಾಮ: ತಸ್ಲೀಮಾ
ಲಿಮ್ಕಾ ದಾಖಲೆಗೆ ಸೇರಲು ಸೀರೆಗಳ ವಿನ್ಯಾಸ