ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಡ್ನಿ ಜಾಲ: ಪ್ರಧಾನ ಆರೋಪಿಗೆ ಶಕೀಲ್ ಬೆದರಿಕೆ
ಗುಡಗಾಂವ್ ಮೂತ್ರಪಿಂಡ ಜಾಲದ ಪ್ರಕರಣದಲ್ಲಿ ತಲೆತಪ್ಪಿಸಿಕೊಂಡಿರುವ ಮುಖ್ಯ ಆರೋಪಿ ಡಾ. ಅಮಿತ್ ಅಲಿಯಾಸ್ ಡಾ. ಸಂತೋಷ್ ರಾವತ್‌ನಿಗಾಗಿ ಕೇವಲ ಪೊಲೀಸರು ಮಾತ್ರವಲ್ಲದೇ ಭೂಗತಲೋಕದ ಪಾತಕಿಗಳು ಕೂಡ ಹುಡುಕುತ್ತಿರುವುದು ಬಯಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಭೂಗತಲೋಕವು ಅಂಗಾಂಗ ಅಕ್ರಮ ಕಸಿಯಲ್ಲಿ ಪಾಲು ನೀಡಬೇಕೆಂದು ಇಚ್ಛಿಸಿತ್ತು.

ಮೂತ್ರಪಿಂಡ ವ್ಯವಹಾರದ ಬಗ್ಗೆ ಭೂಗತಲೋಕಕ್ಕೆ ಮುಂಚಿತವಾಗಿಯೇ ತಿಳಿದಿತ್ತು ಮತ್ತು ಪಾತಕಿ ಚೋಟಾ ಶಕೀಲ್ ಡಾ. ಅಮಿತನಿಗೆ ಬೆದರಿಕೆ ಹಾಕಿ ಅಕ್ರಮ ಹಣವನ್ನು ನೀಡುವಂತೆ ಒತ್ತಾಯಿಸಿದ್ದ. ಕಳೆದ ವರ್ಷ ಅಮಿತ್ ಹತ್ಯೆಗೆ ಮುಂಬೈಗೆ ಆಗಮಿಸಿದ್ದ ಪಾತಕಿ ಚೋಟಾ ಶಕೀಲ್‌ನ ಇಬ್ಬರು ಶೂಟರ್‌ಗಳನ್ನು ಅಪರಾಧ ವಿಭಾಗ ಬಂಧಿಸಿತ್ತು. ಅಮಿತ್ ಕುಟುಂಬ 25 ಕೋಟಿ ರೂ.ಗಳನ್ನು ನೀಡಲು ನಿರಾಕರಿಸಿದ್ದರಿಂದ ಅಮಿತ್ ಹತ್ಯೆ ಸಲುವಾಗಿ ಅವರಿಬ್ಬರನ್ನು ಭಾರತಕ್ಕೆ ಕಳಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಮಾಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಮತ್ತು ತನ್ವೀರ್ ಮಹಮದ್ ಅಸ್ಲಾಂ ಸೈಯದ್ ಅವರನ್ನು ಸುಲಿಗೆ ನಿರೋಧಕ ವಿಭಾಗವು ಮುಂಬೈನ ಬಾಂದ್ರಾ ಬಸ್ ನಿಲ್ದಾಣದ ಬಳಿ ಬಂಧಿಸಿತ್ತು.
ಮತ್ತಷ್ಟು
ಹೇಯ ಅಪರಾಧಕ್ಕೆ ಸಹಾನುಭೂತಿಯಿಲ್ಲ
ನೆನೆಗುದಿಗೆ ಬಿದ್ದ ಸೇತುಸಮುದ್ರಂ ಯೋಜನೆ
ತಮಿಳುನಾಡು: ದೂರವಾಣಿ ಕದ್ದಾಲಿಕೆ ಆರೋಪ
ಉ.ಪ್ರ. ಸಂಸದ ಅತೀಕ್ ಅಹ್ಮದ್ ಬಂಧನ
ಮೋದಿ ಹೆಸರು ತೆಗೆಯಲು ಹೈಕೋರ್ಟ್ ಆದೇಶ
ಸೇತುಸಮುದ್ರಂ ಪ್ರಮಾಣಪತ್ರ: 4 ವಾರ ಕಾಲಾವಕಾಶ