ಕೇಂದ್ರ ಸರಕಾರವು ಪ್ರಸ್ತಾಪಿತ ಇಂಧನ ಬೆಲೆ ಏರಿಕೆಯ ನಿರ್ಣಯ ಕೈಗೊಂಡಿದ್ದೇ ಆದರೆ, ಸರಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ವಾಪಸ್ ತೆಗೆದುಕೊಳ್ಳಬೇಕಾದೀತು ಎಂದು ಎಡಪಕ್ಷಗಳು ಮತ್ತೊಂದು ಬಾರಿ ಯುಪಿಎಯನ್ನು ಎಚ್ಚರಿಸಿವೆ,
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದಲ್ಲಿ, ನಮ್ಮ ಮತ್ತು ಯುಪಿಎ ನಡುವಣ ಸಂಬಂಧ ಸಡಿಲವಾಗುತ್ತದೆ. ಆಗ ನಾವು ಯುಪಿಎ ಸರಕಾರದೊಂದಿಗಿನ ಮೈತ್ರಿಯನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇಂಧನ ಬೆಲೆ ಏರಿಸಿದ್ದೇ ಆದಲ್ಲಿ, ಎಡಪಕ್ಷಗಳು ರಾಷ್ಟ್ರವ್ಯಾಪಿಯಾಗಿ ಚಳವಳಿ ನಡೆಸುತ್ತವೆ ಎಂದೂ ಅವರು ಹೇಳಿದರು.
ಇಂಧನ ಬೆಲೆ ಏರಿಸಿ ಜನಸಾಮಾನ್ಯರಿಗೆ ಹೊರೆ ಹೊರಿಸುವ ಬದಲು ಸುಂಕ ಕಡಿತಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದ ರಾಜಾ, ಪೆಟ್ರೋಲಿಯಂ ಮತ್ತು ಗಣಿ ವಿಭಾಗದಲ್ಲಿ ವಿದೇಶೀ ನೇರ ಹೂಡಿಕೆಗೆ ಅವಕಾಶ ನೀಡುವ ಕೇಂದ್ರ ಸರಕಾರದ ಪ್ರಸ್ತಾಪಕ್ಕೂ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
|