ಹರಿಯಾಣದ ಗುರಗಾಂವ್‌ನಲ್ಲಿ ಬಯಲಿಗೆ ಬಂದ ಕಿಡ್ನಿ ಅಂಗಾಂಗ ಕಸಿ ಕಾಂಡಕ್ಕೆ ಸಂಬಂಧಿಸಿದಂತೆ ಇಂಟರಪೋಲ್ ಇರ್ವರ ಆಪಾದಿತರ ವಿರುದ್ಧ ಅಂತಾರಾಷ್ಟ್ರೀಯ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಪೊಲೀಸ್ ದಾಳಿಗೆ ಮುನ್ನ ಇಬ್ಬರು ಪ್ರಮುಖ ಆರೋಪಿಗಳು ಭಾರತದಿಂದ ಪಲಾಯನಗೈದಿರುವ ಸಾಧ್ಯತೆಯನ್ನು ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ತನಿಖಾ ದಳ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಆಪಾದಿತ ಜೀವನ್ ಕುಮಾರ್ ಮತ್ತು ಪ್ರಮುಖ ಆರೋಪಿ ಅಮೀತ್ ಕುಮಾರ್ ವಿರುದ್ಧ ಇಂಟರಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ನವದೆಹಲಿಯ ಹತ್ತಿರ ಗುರಗಾಂವ್‌ನಲ್ಲಿ ಮನೆಯಲ್ಲಿ ಇದ್ದ ಅನಧಿಕೃತ ಆಸ್ಪತ್ರೆಯನ್ನು ಹರಿಯಾಣ ಪೊಲೀಸರು ಪತ್ತೆ ದಾಳಿ ಮಾಡಿದ ನಂತರ ಅಕ್ರಮ ಅಂಗಾಂಗ ಕಸಿ ಕಾಂಡ ಬಯಲಿಗೆ ಬಂದಿದೆ.
ಪೊಲೀಸರ ಪ್ರಕಾರ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಅಂದಾಜು 500 ಜನರನ್ನು ಶಸ್ತ್ರ ಚಿಕಿತ್ಸೆಗೆ ಗುರಿಮಾಡಿ ಅವರ ಮೂತ್ರಕೋಶಗಳನ್ನು ಹೊರತೆಗೆದು. ಬೇರೆ ವ್ಯಕ್ತಿಗಳಿಗೆ ಕಿಡ್ನಿ ಕಸಿ ಮಾಡಲಾಗಿದೆ. ಕಿಡ್ನಿ ಕಸಿ ಮಾಡಿಸಿಕೊಂಡ ವ್ಯಕ್ತಿಗಳಲ್ಲಿ ಕೆಲವರು ವಿದೇಶಿಯರು ಇದ್ದಾರೆ ಎಂದು ಆಪಾದಿಸಿದ್ದಾರೆ.
ಕಾನೂನು ಬಾಹಿರವಾಗಿ ಕಿಡ್ನಿ ಕಸಿ ಮಾಡಿರುವ ಆರೋಪದ ಮೇರೆ ಕುಮಾರ್ (40) ಮತ್ತು ಜೀವನ್ (36) ವಿರುದ್ಧ ಅಂತರಾರಾಷ್ಟ್ರೀಯ ಮಟ್ಟದ ಬಂಧನದ ವಾರಂಟ್‌ನ್ನು ಇಂಟರಪೋಲ್ ಜಾರಿ ಮಾಡಿದೆ.
|