ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ ಒತ್ತಡ ಬೇಡ ಪವಾರ ಸಲಹೆ
ದೇಶಕ್ಕೆ ಇಂದು ಸ್ಥಿರತೆ ಅಗತ್ಯವಾಗಿದ್ದು, ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದದ ಜಾರಿಗೆ ಕುರಿತಂತೆ ಸರಕಾರ ತನ್ನ ಮಿತ್ರ ಪಕ್ಷಗಳ ಮೇಲೆ ಒತ್ತಡ ತರಕೂಡದು ಎಂದು ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಯುಪಿಎ ಸರಕಾರದಲ್ಲಿ ಪ್ರಮುಖ ಅಂಗಪಕ್ಷವಾಗಿರುವ ಎನ್‌ಸಿಪಿಯ ಹಿರಿಯ ನಾಯಕ ಶರದ್ ಪವಾರ ಅವರು ಪ್ರಧಾನಿ ಹುದ್ದೆಗೆ ತಾನು ಸೂಕ್ತ ವ್ಯಕ್ತಿ ಎಂದು ಶಿವಸೇನಾ ನಾಯಕ ಬಾಳ ಠಾಕ್ರೆಯವರ ಹೇಳಿಕೆಯಿಂದ ಮುಜುಗರವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿ, ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸರಕಾರವು ತಾರ್ಕಿಕ ನಿರ್ಧಾರ ತೆಗೆದುಕೊಳ್ಳಬೇಕು. ಸಹ ಪಕ್ಷಗಳಿಗೆ ಅಣು ಒಪ್ಪಂದದಿಂದ ಆಗುವ ಲಾಭ-ಹಾನಿಗಳ ಕುರಿತು ಸಮರ್ಪಕವಾಗಿ ತಿಳಿಸಿದರೆ ಅಣು ಒಪ್ಪಂದದ ಜಾರಿಗೆ ಸಹಮತ ಪಡೆದುಕೊಳ್ಳಬಹುದು. ಸಂಸತ್ತಿನಲ್ಲಿ ಬೆಂಬಲ ಪಡೆಯುವಲ್ಲಿ ಸರಕಾರ ವಿಫಲವಾದರೆ ತಾರ್ಕಿಕ ತೀರ್ಮಾನಕ್ಕೆ ಬರುವುದು ಸೂಕ್ತ ಎಂದು ಸೂಚ್ಯವಾಗಿ ಅಣು ಒಪ್ಪಂದದ ಜಾರಿಗೆ ಸರಕಾರ ಪಟ್ಟುಹಿಡಿಯುವುದನ್ನು ಬಿಡಬೇಕು ಎಂದು ಹೇಳಿದರು.

ಕರಣ್ ಥಾಪರ್ ಅವರೊಂದಿಗೆ ಸಿಎನ್ಎನ್‌-ಐಬಿಎನ್ ಚಾನೆಲ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ದೇಶಕ್ಕೆ ಇಂದು ಸ್ಥಿರತೆ ಮತ್ತು ಅಭಿವೃದ್ದಿಯ ಅಗತ್ಯ ಇದೆ. ದೇಶಕ್ಕೆ ಇಂದು ಶಕ್ತಿ ಸಂಪನ್ಮೂಲದ ಅವಶ್ಯಕತೆ ಇದ್ದು. ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ತಮ್ಮ ಬೆಂಬಲ ಇದೆ ಎಂದು ಹೇಳಿದರು,

ನಾಗರಿಕ ಅಣು ಒಪ್ಪಂದ ಜಾರಿಗೆ ಬಂದಲ್ಲಿ ದೇಶದ ಶಕ್ತಿ ಸಂಪನ್ಮೂಲಕ್ಕೆ ಬಲ ಬರುತ್ತದೆ. ಆದರೆ ದೇಶದ ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ದಿಯನ್ನು ನಷ್ಟಕ್ಕೆ ಈಡು ಮಾಡುವ ಒಪ್ಪಂದ ಬೇಕಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಹಡಗು ಅನಿಲ ಸೋರಿಕೆಗೆ ಐವರ ಬಲಿ
ಕಿಡ್ನಿ ಕಾಂಡ: ಇರ್ವರ ವಿರುದ್ಧ ಅಂತಾರಾಷ್ಟ್ರೀಯ ವಾರಂಟ್
ಬೆಂಬಲ ಹಿಂತೆಗೆತ: ಮತ್ತೊಮ್ಮೆ ಸಿಪಿಎಂ ಎಚ್ಚರಿಕೆ
ಕಿಡ್ನಿ ಜಾಲ: ಪ್ರಧಾನ ಆರೋಪಿಗೆ ಶಕೀಲ್ ಬೆದರಿಕೆ
ಹೇಯ ಅಪರಾಧಕ್ಕೆ ಸಹಾನುಭೂತಿಯಿಲ್ಲ
ನೆನೆಗುದಿಗೆ ಬಿದ್ದ ಸೇತುಸಮುದ್ರಂ ಯೋಜನೆ