ಅರುಣಾಚಲದತ್ತ ಗಮನ ಭಾರತದ ಭೌಗೋಳಿಕ ಸಾರ್ವಭೌಮತೆಯನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಧಾನಿ ಡಾ ಮನ್‌ಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶದ ಸಮಗ್ರ ಅಭಿವೃದ್ದಿಗೆ ಸಾವಿರ ಕೋಟಿ ರೂಗಳ ನೇರವು ಘೋಷಿಸುವ ಮೂಲಕ ಸೂರ್ಯೋದಯದ ನಾಡು ಭಾರತದ ಅವಿಭಾಜ್ಯ ಅಂಗ ಎಂದು ಅರುಣಾಚಲ ಪ್ರದೇಶ ವಿಚಾರದಲ್ಲಿ ತಗಾದೆ ತೆಗೆಯುವ ಚೀನಾಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಪ. ಬಂಗಾಲದ ವೈಪಲ್ಯ ಪಶ್ಚಿಮ ಬಂಗಾಲದಲ್ಲಿ ಹರಡಿದ ಹಕ್ಕಿ ಜ್ವರವನ್ನು ತಡೆಗಟ್ಟುವಲ್ಲಿ ಸರಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಿತು. ಕುಕ್ಕಟ ಸಂಹಾರ ಮಾಡಿದ ಸಿಬ್ಬಂದಿ ತಮ್ಮ ಕುಟುಂಬಗಳಿಗೆ ವೈರಸ್ ಸೋಂಕಿನಿಂದ ಮರಳಿರುವುದು ಸಮುದಾಯ ಆರೋಗ್ಯದ ಮೇಲೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಚಳಿಗೆ ಬಲಿ ಕಳೆದ ಎರಡು ವಾರಗಳಲ್ಲಿ ಜೋರುಗೊಂಡ ಚಳಿ ಉತ್ತರ ಭಾರತದಲ್ಲಿ 47 ಜನರನ್ನು ಆಹುತಿ ತೆಗೆದುಕೊಂಡಿತು. ಉತ್ತರ ಪ್ರದೇಶದ ಉತ್ತರ ಭಾಗ ಚಳಿಗೆ ನಡುಗಿದ್ದು ಉತ್ತರ ಪ್ರದೇಶದಲ್ಲಿ 38 ಜನರು ಚಳಿ ತಡೆಯಲಾರದೇ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಿಂದ ಪ್ರಾರಂಭವಾಗಿರುವ ಚಳಿಯಿಂದ ಇನ್ನೂ ಜನರಿಗೆ ಮುಕ್ತಿ ಸಿಕ್ಕಿಲ್ಲ
ಮಹಾತ್ಮನ ಚಿತಾ ಭಸ್ಮ ವಿಸರ್ಜನೆ ಬರೋಬ್ಬರಿ ಅರವತ್ತು ವರ್ಷಗಳ ಹಿಂದೆ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಉಳಿದುಕೊಂಡಿದ್ದ ಚಿತಾ ಭಸ್ಮ ಮಾಯಾನಗರಿ ಮುಂಬೈ ಹತ್ತಿರ ಅರಬ್ಬಿ ಸಮುದ್ರದಲ್ಲಿ ಬಿಡಲಾಯಿತು. ಅಲ್ಲಿಗೆ ಉಳಿದುಕೊಂಡಿದ್ದ ಭೌತಿಕ ಕುರುಹು ಇದೀಗ ಬೆಳಗಾವಿಯ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯ ಹತ್ತಿರ ಹಾದು ಹೋಗುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗಾಂಧಿ ಸ್ಮಾರಕದಲ್ಲಿ ಮಾತ್ರ ಉಳಿದುಕೊಂಡಿದೆ. ಜನವರಿ 30ರಂದು ಕೊಡಗು ಜಿಲ್ಲೆಯ ಮಡಿಕೆರಿಯಲ್ಲಿ ಇರಿಸಲಾಗಿದ್ದ ಚಿತಾ ಭಸ್ಮವನ್ನು ವಿಸರ್ಜಿಸಲಾಯಿತು.
ಕಿಡ್ನಿ ಕಾಂಡದ ರಹಸ್ಯದ ಬಯಲು ಗುರಗಾಂವ್‌ನಲ್ಲಿ ಕಳೆದ ಎಂಟು ವರ್ಷಗಳಿಂದ ನಿರಾಂತಕವಾಗಿ ಮುಗ್ಧರ ಕಿಡ್ನಿಗಳನ್ನು ಮಾರಿ ಸಾವಿರಾರು ಕೋಟಿ ಗಳಿಸಿದ ಡಾ ಅಮೀತ್ ಎಂಬ ಆರೋಪಿ ಈಗ ಪಲಾಯನಗೊಂಡಿದ್ದಾನೆ. ಪೊಲೀಸರು ಬಹಿರಂಗ ಪಡಿಸಿದ ಮಾಹಿತಿಗಳ ಪ್ರಕಾರ ಅಕ್ರಮ ಅಂಗಾಂಗ ಕಸಿ ಮಾಡಿಸಿಕೊಂಡವರಲ್ಲಿ ವಿದೇಶಿಯರೇ ಹೆಚ್ಚು ಎಂದು ತಿಳಿದು ಬಂದಿದೆ.
|