ಗುರಗಾಂವ್‌ನ ಕಿಡ್ನಿ ಕಾಂಡದ ಪ್ರಮುಖ ಆರೋಪಿ ಡಾ. ಅಮೀತ್ ಸಹಾಯಕ ಡಾ. ಉಪೇಂದ್ರ, ಪೊಲೀಸರ ವಿಚಾರಣೆಯಲ್ಲಿ ಮತ್ತಷ್ಟು ಶನಿವಾರ ಮತ್ತಷ್ಟು ಮಾಹಿತಿ ಬಹಿರಂಗ ಪಡಿಸಿದ್ದು, ಡಾ ಉಪೇಂದ್ರ ಪ್ರಕಾರ ಕಿಡ್ನಿ ಕಾಂಡದ ಸೂತ್ರದಾರಿ ಗಲ್ಫ್ ಮತ್ತು ಯುರೋಪ್‌ಗಳಲ್ಲಿನ 150ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬಂಡವಾಳ ಹೂಡಿದ್ದಾನೆ. ನೇಪಾಳನ ಕಠ್ಮಂಡು ನಗರದಲ್ಲಿ ಡಾ ಅಮೀತ್ ಮಾಲಿಕತ್ವದ ಆಸ್ಪತ್ರೆಯೊಂದು ಕಾರ್ಯನಿರ್ವಹಿಸುತ್ತಿದ್ದು. ಒಟ್ಟು ವ್ಯವಹಾರ ಸಾವಿರ ಕೋಟಿ ಮೌಲ್ಯದ್ದಾಗಿರಬಹುದು ಎಂದು ಮಾಹಿತಿ ನೀಡಿದ್ದಾನೆ.
ಮೊರಾದಾಬಾದ್‌ನ ವಿಶೇಷ ಪೊಲೀಸ್ ತನಿಖಾ ತಂಡವು ನವದೆಹಲ್ಲಿ ಇರುವ ಡಾ. ಅಮೀತ್‌ನ ಆರು ಜನ ಸಹಚರರ ಶೋಧದಲ್ಲಿದ್ದಾರೆ. ಕೈಲಾಸ್ ಗುಪ್ತಾ, ನೀರಜ್ ಗರ್ಗ್, ಶ್ರೀ ಅಗರವಾಲ್, ಯುನೀಸ್ ಭಾಯಿ, ಯಶಪಾಲ್ ಶರ್ಮಾ, ಮತ್ತು ಸರ್ಜೀತ್ ಝಾ ಎಂದು ಪೊಲೀಸರು ಆರೋಪಿಗಳು ಹೆಸರುಗಳನ್ನು ಬಿಡುಗಡೆ ಮಾಡಿದ್ದಾರೆ.
ಕಿಡ್ನಿಕಾಂಡದಲ್ಲಿ ಭೂಗತ ಲೋಕದ ಪಾಲು ಇರುವುದನ್ನು ಡಾ. ಉಪೇಂದ್ರ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಭೂಗತ ಲೋಕದ ಪಾತಕಿ ಛೋಟಾ ಶಕೀಲ್, ಕಿಡ್ನಿ ಕಸಿಯಿಂದ ಸಂಪಾದಿಸುತ್ತಿರುವ ಹಣದಲ್ಲಿ ಪಾಲು ನೀಡುವಂತೆ ಬೆದರಿಕೆ ಒಡ್ಡಿದ್ದನು. ಬೆದರಿಕೆಗೆ ಮಣಿಯದ್ದರಿಂದ ಡಾ. ಅಮೀತ್ ಕೊಲೆ ಮಾಡುವುದಕ್ಕೆ ಶೂಟರುಗಳನ್ನು ಕಳುಹಿಸಿಕೊಟ್ಟಿದ್ದನು ಎಂದು ಹೇಳಿದ್ದಾನೆ.
|