ಜನಾಂಗೀಯ ಅಸಮಾನತೆ ವಿರುದ್ಧ ಆಸಮಾಧಾನ ವ್ಯಕ್ತಪಡಿಸಿ ಪ್ರತಿಭಟನಾ ರಾಲಿ ನಡೆಸಿದ ಮೂಲ ಭಾರತೀಯ ಜನಾಂಗ, ಮುಂಬರುವ ಚುನಾವಣೆಯಲ್ಲಿ ಆಡಳಿತದ ಪಕ್ಷದ ಪರ ಮತ ಚಲಾಯಿಸುವುದಿಲ್ಲ ಎಂಬ ಶಂಕೆಯನ್ನು ಮಲೇಷಿಯದ ಪ್ರಧಾನಿ ಅಬ್ದುಲ್ಲಾ ಬಡಾವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದು ರೈಟ್ಸ್ ಆಕ್ಷನ್ ಫೋರಂ (ಹಿಂಡ್ರಾಫ್) ಎಂಬ ಸರಕಾರೇತರ ಸಂಘಟನೆಯು ನವಂಬರ್ 2007ರಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ ನಂತರ ಸರಕಾರ ರಾಲಿಯನ್ನು ಕಾನೂನು ಭಾಹಿರ ಎಂದು ಘೋಷಿಸಿದ ಮೇಲೆ ನಡೆದ ಬೆಳವಣಿಗೆಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಮೂಲ ನಿವಾಸಿಗಳ ವಿರುದ್ದ ಸರಕಾರ ತಾರತಮ್ಯ ಧೋರಣೆ ಅನುಸರಿಸುತ್ತಿಲ್ಲ ಎಂದ ಅವರು ಭಾರತೀಯ ಮೂಲ ನಿವಾಸಿಗಳು ಮಾಡಿರುವ ದೂರುಗಳತ್ತ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಸ್ಥಳೀಯ ಪತ್ರಿಕೆಗೆ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂಡ್ರಾಫ್ ಬೆಳಕಿಗೆ ತಂದ ಭಾರತೀಯ ಮೂಲನಿವಾಸಿಗಳ ಸಮಸ್ಯೆ ಚುನಾವಣೆಯ ಫಲಿತಾಂಶಗಳ ಪರಿಣಾಮ ಬೀರುವುದು ಖಚಿತ ಎಂದು ಬಾರಿಸನ್ ನ್ಯಾಷನಲ್ ಸಮ್ಮಿಶ್ರ ಪಕ್ಷದ ನೇತೃತ್ವ ವಹಿಸಿಕೊಂಡಿರುವ ಅಬ್ದುಲ್ಲಾ ಹೇಳಿದರು. ಚುನಾವಣಾ ಸಮೀಕ್ಷೆಯ ಪ್ರಕಾರ ಬಾರಿಸನ್ ಪಕ್ಷವು ಚುನಾವಣೆಯಲ್ಲಿ ಭಾರಿ ಅಂತರದ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.
20 ಸಾವಿರ ಭಾರತೀಯ ಮೂಲ ನಿವಾಸಿಗಳು ಸೇರಿದ್ದ ಪ್ರತಿಭಟನೆಯ ನಂತರ ಸರಕಾರ ಎಚ್ಚೆತ್ತುಕೊಂಡಿದ್ದು ಅಲ್ಲಿನ ಮೂಲ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸಿದೆ ಇದರಲ್ಲಿ ಹಿಂದೂ ದೇವಸ್ಥಾನಗಳ ದ್ವಂಸಕಾರ್ಯವು ಸೇರಿದೆ. ನಂತರ ಡಿಸೆಂಬರ್ ತಿಂಗಳಿನಲ್ಲಿ ಅಲ್ಲಿನ ಹಿಂದುಗಳ ಹಬ್ಬ ಥೈಪಾಸುಮ್‌ನ್ನು ಸಾರ್ವಜನಿಕ ರಜೆ ಎಂದು ಪ್ರಧಾನಿ
|