ಉತ್ತರಪ್ರದೇಶ ಸಮುದಾಯದ ವಿರುದ್ದ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ರಾಜ್‌ಠಾಕ್ರೆ ನೀಡಿದ ಹೇಳಿಕೆ ಹಾಗೂ ನಡೆದ ಹಿಂಸಾಚಾರ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇಶಮುಖ್ ಡಿಜಿಪಿ ಹಾಗೂ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.
ಹೊರರಾಜ್ಯಗಳಿಂದ ಬಂದವರಾಗಲಿ ಅಥವಾ ಯಾವುದೇ ಸಮುದಾಯದ ವಿರುದ್ದವಾಗಲಿ ನಡೆದ ಹಿಂಸಾಚಾರವನ್ನು ಸಹಿಸುವುದಿಲ್ಲ.ಇಂತಹ ಕೃತ್ಯಗಳನ್ನು ಎಸಗಿದವರ ವಿರುದ್ದ ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದೇಶಮುಖ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸ್ ಅಧಿಕಾರಿಗಳು ದಾದರ್ ಪ್ರದೇಶದಲ್ಲಿ ಹೊರರಾಜ್ಯದ ಟ್ಯಾಕ್ಸಿ ಚಾಲಕನ ಮೇಲೆ ದಾಳಿ ನಡೆಸಿದ 15 ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ 15 ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಸೇರಿದಂತೆ ಉತ್ತರ ಪ್ರದೇಶದ ಸಮುದಾಯದ ವಿರುದ್ದ ರಾಜ್ ಠಾಖ್ರೆ ನೀಡಿದ ಹೇಳಿಕೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ನಾಳೆ ತುರ್ತುಸಂಪುಟ ಸಭೆ ಕರೆದಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
|