ದೇಶದಲ್ಲಿ ಹೆಚ್ಚುತ್ತಿರುವ ನಕ್ಸಲ್ ಹಿಂಸಾಚಾರವನ್ನು ಹತ್ತಿಕ್ಕುವುದಕ್ಕೆ ಸೇನೆಯನ್ನು ನಿಯೋಜಿಸಲಾಗುವುದಿಲ್ಲ. ಸೇನೆ ಈಗಾಗಲೇ ಸಾಕಷ್ಟು ಜವಾಬ್ದಾರಿ ವಹಿಸಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ನಕ್ಸಲ್ ಹಿಂಸಾಚಾರವನ್ನು ನಿಗ್ರಹಿಸುವುದಕ್ಕೆ ಸೇನೆಯ ಬಳಕೆಯ ವಿರುದ್ಧ ನನ್ನ ಪ್ರಬಲ ವಿರೋಧವಿದೆ. ಪ್ರತಿಯೋಂದು ವಿಚಾರಕ್ಕೆ ಸೇನೆಯ ಉಪಯೋಗ ಪಡೆಯುವುದು ಸರಿಯಲ್ಲ. ಸಶಸ್ತ್ರ ಸೇನಾ ಪಡೆ ಈಗಾಗಲೇ ನಾಗರಿಕ ಸೇವೆ ಅಧಿಕಾರಗಳ ನೆರವಿಗೆ ಸಂದರ್ಭಕ್ಕೆ ತಕ್ಕಂತೆ ಬರುತ್ತಿದೆ.
ನಕ್ಸಲ್ ಹಿಂಸಾಚಾರವನ್ನು ನಿಯಂತ್ರಿಸುವುದಕ್ಕೆ ಸೇನೆ ಹಿಂಜರಿಯುವುದಿಲ್ಲ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಸೇನೆ ಈಗಾಗಲೇ ನಕ್ಸಲ್ ಪೀಡಿತ ರಾಜ್ಯಗಳ ಪೊಲೀಸರಿಗೆ ತಾಂತ್ರಿಕ ನೆರವು ಮತ್ತು ತರಬೇತಿಯನ್ನು ನೀಡಿ ನಕ್ಸಲ್‌ರ ವಿರುದ್ಧ ನಡೆಯುವ ಕಾರ್ಯಾಚರಣೆಗಳಿಗೆ ಸಜ್ಜುಗೊಳಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.
ನಕ್ಸಲಿಸಂ ವಿರುದ್ದ ಹೋರಾಡುವುದು ಆಯಾ ರಾಜ್ಯಗಳ ಪೊಲೀಸರಿಗೆ ಬಿಟ್ಟ ವಿಷಯ. ಅವಶ್ಯಕತೆ ಬಿದ್ದರೆ ಅರೇ ಸೇನಾ ಪಡೆಯ ನೆರವನ್ನು ಪಡೆಯಬಹುದು. ಯುದ್ಧ ನೌಕೆ ಮತ್ತು ಸಬ್‌ಮರೀನ್‌ಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿರುವುದನ್ನು ತಡೆಯಲು ನೌಕಾದಳದ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಸ್ತ್ರಾಸ್ತ್ರಗಳಿರುವ ಹಡಗು ಅಕಸ್ಮಾತ್ ಅಪಘಾತಕ್ಕೆ ಈಡಾದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.
|