ಜಿಲ್ಲೆಯ ಮೂರು ಗ್ರಾಮಗಳಲ್ಲಿ ನಡೆದ ಜೆಲ್ಲಿಕಟ್ಟು ಸ್ಪರ್ಧೆಯಲ್ಲಿ ಸುಮಾರು 95 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮನಪ್ಪರೈ ಪಟ್ಟಣದ ಹತ್ತಿರವಿರುವ ಮಂಜಂಪತ್ತಿ ಗ್ರಾಮದಲ್ಲಿ ನಡೆದ ಜಲ್ಲಿಕಟ್ಟು ಪಂದ್ಯದಲ್ಲಿ 30 ಮಂದಿಗೆ ಗಾಯಗಳಾಗಿದ್ದು ಸ್ಥಳಿಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿವಗಂಗಾ ಜಿಲ್ಲೆಯ ಕಟ್ಟುಕುಡಿಪತ್ತಿ ಗ್ರಾಮದಲ್ಲಿ ಪಳನಿ ಸ್ವಾಮಿ (54) ಎನ್ನುವ ವ್ಯಕ್ತಿ ಜಲ್ಲಿಕಟ್ಟು ಪಂದ್ಯಾವಳಿಯ ಮೈದಾನದಲ್ಲಿಯೇ ಸಾವನ್ನಪ್ಪಿದ್ದಾನೆ.ಲಾಲ್‌ಗುಡಿ ಗ್ರಾಮದಲ್ಲಿ 30 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಸೂರಿಯೂರ್ ಗ್ರಾಮದಲ್ಲಿ ನಡೆದ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ 35 ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|