ಇಂದು ನಡೆಯುವ ಸಂಸದೀಯ ಕಲಾಪಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮುಖ್ಯ ಸಚೇತಕರು ಸಂಸತ್ತು ಮತ್ತು ವಿಧಾನ ಸಬೆಗಳಲ್ಲಿ ನಡೆಯುವ ಕಲಾಪಗಳ ಸಮಯದಲ್ಲಿ ಆಗುವ ಗದ್ದಲಗಳಿಗೆ ಮೂಕ ಪ್ರೇಕ್ಷಕರಾಗಿದ್ದಾರೆ. ಸಂಸದೀಯ ಕಾರ್ಯಕಲಾಪಗಳು ಸುಗಮವಾಗಿ ನಡೆಯಬೇಕಾದರೆ ಆಯಾ ಪಕ್ಷದ ಸಚೇತಕರುಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಿದೆ ಎಂದು ಉಪರಾಷ್ಟ್ರಪತಿ ಡಾ ಹಮೀದ್ ಅನ್ಸಾರಿ ಅನಿಸಿಕೆ ವ್ಯಕ್ತಪಡಿಸಿದರು.
ಮುಂಬೈನಲ್ಲಿ ನಡೆದ 14ನೇ ಅಖಿಲ ಭಾರತೀಯ ಮುಖ್ಯ ಸಚೇತಕರುಗಳ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂಸತ್ತಿನ ಸುಗಮ ಕಲಾಪ ನಡೆಯದ ಕಾರಣ ವರ್ಷದಿಂದ ವರ್ಷಕ್ಕೆ ಸಂಸದೀಯ ಕಲಾಪಗಳಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆಯಾಗುತ್ತ ಬರುತ್ತಿದೆ. ಮತ್ತು ಕ್ರಿಮಿನಲ್ ಹಿನ್ನಲೆಯನ್ನು ಹೊಂದಿದವರು ಇಂದು ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಸಂಸದೀಯ ಕಾರ್ಯಕಲಾಪ ಸುಗಮವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ವಹಿಸಿಕೊಂಡ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ.
1997ರಲ್ಲಿ 50ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆದ ವಿಶೇಷ ಸಂಸದೀಯ ಕಾರ್ಯಕಲಾಪದಲ್ಲಿ ಪ್ರಶ್ನೋತ್ತರ ವೇಳೆಯನ್ನು ಮೀರದ ಮತ್ತು ಭಾವಿಯತ್ತ ನುಗ್ಗಿ ಕಲಾಪಕ್ಕೆ ಅಡ್ಡಿ ಪಡಿಸುವ ಮತ್ತು ಘೋಷಣೆಗಳಿಂದ ಅದ್ಯಕ್ಷರ ಭಾಷಣಕ್ಕೆ ಅಡ್ಡಿಪಡಿಸುವುದರ ವಿರುದ್ಧ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ ಆ ತೀರ್ಪನ್ನು ಇಂದು ಸಂಸದರು ಗಾಳಿಗೆ ತೂರಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹತ್ತು ವರ್ಷಗಳ ಅವಧಿಯಲ್ಲಿ ಜನಪ್ರತಿನಿಧಿಗಳು ತಾವು ಮಾಡಿದ ಪ್ರತಿಜ್ಞೆಯನ್ನು ಮುರಿದಿದ್ದಾರೆ. ನಿರ್ದಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಕೂಡ ಸಂಸತ್ತಿನ ಕಾರ್ಯಕಲಾಪಗಳು ಕೆಲವೇ ಕೆಲವು ಜನಪ್ರತಿನಿಧಿಗಳ ಒತ್ತಡದಿಂದ ಕಲಾಪಗಳು ಸ್ಥಗಿತಗೊಳ್ಳುತ್ತಿವೆ ಎಂದು ಅವರು ಹೇಳಿದರು.
|